ಭಾರತ ಕಿರಿಯರ ಬಾಸ್ಕೆಟ್​ಬಾಲ್​ ತಂಡಕ್ಕೆ ಮೂವರು ಕನ್ನಡತಿಯರು ಆಯ್ಕೆ

ಭಾರತ ಕಿರಿಯರ ಬಾಸ್ಕೆಟ್​ಬಾಲ್​ ತಂಡಕ್ಕೆ ಮೂವರು ಕನ್ನಡತಿಯರು ಆಯ್ಕೆ
ಭಾರತ ಕಿರಿಯರ ಬಾಸ್ಕೆಟ್​ಬಾಲ್​ ತಂಡಕ್ಕೆ ಮೂವರು ಕನ್ನಡತಿಯರು ಆಯ್ಕೆ
Published on
ಬೆಂಗಳೂರು: ಕರ್ನಾಟಕದ ಮೂವರು ಆಟಗಾರ್ತಿಯರಾದ ಮಹೆಕ್​ ಶರ್ಮ, ಅದಿತಿ ಸುಬ್ರಮಣ್ಯನ್​ ಮತ್ತು ತಾರುಶೀ ತರುಣ್​ ಭಾರತದ 18 ವಯೋಮಿತಿ ಮಹಿಳಾ ಬಾಸ್ಕೆಟ್​ಬಾಲ್​ (basketball) ತಂಡಕ್ಕೆ ಆಯ್ಕೆಯಾಗಿದ್ದಾರೆ. ಜುಲೈ 13ರಿಂದ 19ರವರೆಗೆ ಥಾಯ್ಲೆಂಡ್​ನ ಬ್ಯಾಂಕಾಕ್​ನಲ್ಲಿ ನಡೆಯಲಿರುವ ಫಿಬಾ 18 ವಯೋಮಿತಿ ಮಹಿಳಾ ಏಷ್ಯಾಕಪ್​ ಬಾಸ್ಕೆಟ್​ಬಾಲ್​ ಚಾಂಪಿಯನ್​ಷಿಪ್​ನಲ್ಲಿ ಈ ತಂಡ ಭಾಗವಹಿಸಲಿದೆ.
ಬಿಎಸ್​ ಶ್ರೀಧರ್​ ಟೂರ್ನಿಗೆ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಬಾಸ್ಕೆಟ್​ಬಾಲ್​ ಸಂಸ್ಥೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net