ಜಮ್ಮು-ಕಾಶ್ಮೀರದಲ್ಲಿ ಆಳವಾದ ಕಣಿವೆಗೆ ಉರುಳಿದ ಸೇನೆಯ ಬಸ್: 3 ಯೋಧರು ದುರ್ಮರಣ

bus
Published on

ಶ್ರೀನಗರ: ಬಿಎಸ್​ಎಫ್ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಒಂದು ಪ್ರಪಾತಕ್ಕೆ ಉರುಳಿದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಗಡಿ ನಿಯಂತ್ರಣ ಪಡೆಯ (ಬಿಎಸ್​ಎಫ್) ಮೂವರು ಮೃತಪಟ್ಟಿದ್ದು, 32ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ವಾಟರ್ ಹೇಲ್ ಪ್ರದೇಶದಲ್ಲಿ ಈ ದುರಂತ ಶುಕ್ರವಾರ ಸಂಭವಿಸಿದೆ. 40 ಅಡಿ ಆಳವಾದ ಕಂದಕಕ್ಕೆ ಬಸ್ ಉರುಳಿಬಿದ್ದಿದೆ. ಎರಡನೇ ಹಂತದ ಚುನಾವಣಾ ನಿಯೋಜನೆಗಾಗಿ ತೆರಳುತ್ತಿದ್ದ ವೇಳೆ ಬಸ್ ಅಪಘಾತಕ್ಕೀಡಾಗಿದೆ.

ಈ ಭೀಕರ ಅಪಘಾತದಲ್ಲಿ 28 ಯೋಧರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತ ನಡೆದ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಯುತ್ತಿದೆ. ಸ್ಥಳೀಯರೂ ರಕ್ಷಣಾ ತಂಡಗಳ ಜೊತೆಗೆ ಸಹಾಯಕ್ಕೆ ಮುಂದಾಗಿದ್ದಾರೆ.

ಈ ಸೇನಾ ಬಸ್​ನಲ್ಲಿ 36 ಬಿಎಸ್‌ಎಫ್ ಯೋಧರು ಪ್ರಯಾಣಿಸುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net