

Kidney : ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಪ್ರಮುಖ ಪಾತ್ರ ವಹಿಸಿ, ರಕ್ತದಿಂದ ತ್ಯಾಜ್ಯವನ್ನು ಶೋಧಿಸುವ ಕಾರ್ಯವನ್ನು ಮಾಡುತ್ತದೆ. ಮೂತ್ರದ ರೂಪದಲ್ಲಿ ದೇಹದಿಂದ ಹೆಚ್ಚುವರಿ ದ್ರವಗಳು ಮತ್ತು ತ್ಯಾಜ್ಯ ಉತ್ಪನ್ನಗಳನ್ನು ತೆಗೆದುಹಾಕುವುದು ಮೂತ್ರಪಿಂಡಗಳ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಇದರ ಜೊತೆಯಲ್ಲಿ ಮೂತ್ರಪಿಂಡದ ಆರೋಗ್ಯವು ಬಹಳ ಮುಖ್ಯವಾಗಿದೆ. ಏಕೆಂದರೆ, ಇವು ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವಗಳನ್ನು ಶೋಧಿಸಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ. ಹೀಗಾಗಿ, ಕೆಲವೊಂದು ತರಕಾರಿಗಳನ್ನು ಸೇವಿಸುವುದರಿಮದ ಮೂತ್ರ ಪಿಂಡದ ಕಾರ್ಯವನ್ನು ಸುಧಾರಿಸಬಹುದು ಆ ತರಕಾರಿಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮೂತ್ರಪಿಂಡದ ಆರೋಗ್ಯಕ್ಕೆ ದೇಹವನ್ನು ಹೈಡ್ರೇಟ್ ಆಗಿಡುವುದು ಬಹಳ ಮುಖ್ಯ. ಸೌತೆಕಾಯಿಗಳು ಶೇ.95 ರಷ್ಟು ನೀರಿನ ಅಂಶವನ್ನು ಹೊಂದಿರುತ್ತವೆ. ಈ ನೀರಿನ ಅಂಶವು ಮೂತ್ರಪಿಂಡಗಳಿಂದ ಕ್ರಿಯೇಟಿನೈನ್ ಮತ್ತು ಯೂರಿಕ್ ಆಮ್ಲದಂತಹ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇತರ ನೀರಿನಂಶವಿರುವ ತರಕಾರಿಗಳಲ್ಲಿ, ಸೌತೆಕಾಯಿಗಳು ಕಡಿಮೆ ಕ್ಯಾಲೋರಿಗಳಲ್ಲಿ ಒಂದಾಗಿದ್ದು, ಇದರ ಬಗ್ಗೆ ಚಿಂತಿಸದೆ ನೀವು ಸಾಧ್ಯವಾದಷ್ಟು ಈ ತರಕಾರಿಯನ್ನು ತಿನ್ನಬಹುದು. ಇನ್ನು ಆರೋಗ್ಯ ಮಟ್ಟವನ್ನು ಸುಧಾರಿಸಲು ಸೌತೆಕಾಯಿಗಳನ್ನು ಸಲಾಡ್ರೂಪದಲ್ಲಿ ಬಳಸಬಹುದು ಇಲ್ಲವೇ ಸೌತೆಕಾಯಿಯ ಜ್ಯೂಸ್ ಮಾಡಿಯೂ ಸೇವಿಸಬಹುದು. ಇದು ದೇಹದ ಆರೋಗ್ಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಸಿಟ್ರೇಟ್ ಅಂಶವು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಪ್ರತಿನಿತ್ಯ ಎರಡು ನಿಂಬೆಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಸಿಟ್ರೇಟ್ ಹೆಚ್ಚಾಗುತ್ತದೆ. ಇದು ಮೂತ್ರ ಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸೂಕ್ಷ್ಮ ದೇಹವನ್ನು ಹೊಂದಿರುವಂತಹ ಜನರು ದೈನಂದಿನ ಆಹಾರದಲ್ಲಿ ನಿಂಬೆರಸವನ್ನು ಸೇವಿಸುವ ಮುನ್ನ ವೈದ್ಯರ ಬಳಿ ಸಂಪರ್ಕಿಸುವುದು ಉತ್ತಮ ವಿಧಾನವಾಗಿದೆ.
ಈ ಸಾಧಾರಣ ಮೂಲಿಕೆ ಮೂತ್ರಪಿಂಡದ ಕಲ್ಲುಗಳ ಮೇಲೆ ರಕ್ಷಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಈ ಮೂಲಿಕೆ ಎಪಿಜೆನಿನ್, ಲ್ಯುಟಿಯೋಲಿನ್ ಮತ್ತು ಕ್ವೆರ್ಸೆಟಿನ್ನಂತಹ ಹಲವಾರು ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ. ಇದು ಪ್ರಬಲವಾದ ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಅಂದಹಾಗೆ, ಕೊತ್ತುಂಬರಿ ಸೊಪ್ಪು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ, ಚಯಾಪಚಯ ಜೈವಿಕ ಗುರುತುಗಳನ್ನು ಸುಧಾರಿಸುತ್ತದೆ. ಹಾಗೆಯೇ ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸುತ್ತದೆ.