ದ್ವಿಚಕ್ರ ವಾಹನ ಮಾಲೀಕನಿಗೆ 3.04 ಲಕ್ಷ ರೂ. ದಂಡ: 300ಕ್ಕೂ ಅಧಿಕ ಬಾರಿ ಸಂಚಾರ ನಿಯಮ ಉಲ್ಲಂಘನೆ

VEHICLE FINE
Published on

ಬೆಂಗಳೂರು : ಪೊಲೀಸರು ದಂಡ ವಸೂಲಿ ಮಾಡಲು ಮುಂದಾದ ವೇಳೆ ದ್ವಿಚಕ್ರ ಸವಾರನೊಬ್ಬ 3.04 ಲಕ್ಷ ರೂ. ಡಂಡ ಹೊಂದಿರುವುದು ಬೆಳಕಿಗೆ ಬಂದಿದೆ.
ಸಂಚಾರ ನಿಯಮ ಉಲ್ಲಂಘನೆಯ ೫೦ ಸಾವಿರಕ್ಕೂ ಅಧಿಕ ದಂಡ ಹೊಂದಿರುವವರ ಮನೆ ಮನೆಗೆ ತೆರಳಿ ಪಾವತಿಸಿಕೊಳ್ಳುವ ಕಾರ್ಯವನ್ನು ನಗರ ಸಂಚಾರ ಪೊಲೀಸರು ಆರಂಭಿಸಿದ್ದಾರೆ. ಈ ವೇಳೆ ನಗರದಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ಬರೋಬ್ಬರಿ ೩೦೦ಕ್ಕೂ ಅಧಿಕ ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬರೋಬ್ಬರಿ ಮೂರು ಲಕ್ಷದ ನಾಲ್ಕುವರೆ ಸಾವಿರ ರೂ. ದಂಡ ಹೊಂದಿರುವುದು ತಿಳಿದು ಬಂದಿದೆ. ೨೦೨೧ ರ ಜ.೩೧ ರಿಂದ ೨೦೨೪ ರ ೆ. ೯ ರ ವರೆಗೆ ಹಲವಾರು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.
ನಗರದ ಸುಧಾಮನಗರ ನಿವಾಸಿಯಾಗಿರುವ ವೆಂಕಟರಾಮನ್ ಎಂಬಾತನ ಕೆಎ ೦೫ ಕೆಎ್ ೭೯೬೯ ನಂಬರಿನ ಹೋಂಡಾ ಆಕ್ಟಿವಾ ಸ್ಕೂಟರಿನ ಮೇಲೆ ಮುನ್ನೂರಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿವೆ. ಇದಕ್ಕೆ ಸಂಚಾರ ಪೊಲೀಸರು ೩.೦೪ ಲಕ್ಷ ರೂ. ದಂಡ ವಿಧಿಸಿದ್ದಾರೆ. ಎಸ್‌ಆರ್ ನಗರ, ವಿಲ್ಸನ್ ಗಾರ್ಡನ್ ನಗರದ ವಿವಿಧ ಪ್ರದೇಶಗಳಲ್ಲಿ ಹೆಲ್ಮಟ್ ಧರಿಸದೆ, ಸಿಗ್ನಲ್ ಜಂಪ್ ಮಾಡಿರುವ, ಒನ್ ವೇಯಲ್ಲಿ ಸ್ಕೂಟರ್ ಚಲಾಯಿಸಿರುವ, ಚಾಲನೆ ವೇಳೆ ಮೊಬೈಲ್ನಲ್ಲಿ ಬಳಕೆ ಮಾಡಿರುವ ಆರೋಪದಡಿ ವೆಂಕಟರಾಮನ್‌ಗೆ ದಂಡ ವಿಧಿಸಲಾಗಿದೆ.
೩.೦೪ ಲಕ್ಷ ರೂ. ದಂಡ ಪಾವತಿಸಬೇಕಿರುವ ವೆಂಕಟರಾಮನ್ ಮನೆಗೆ ಸಂಚಾರ ಪೊಲೀಸರು ತೆರಳಿ ‘ದಂಡ ಪಾವತಿಸುವಂತೆ’ ಸೂಚಿಸಿದ್ದಾರೆ. ಈ ವೇಳೆ ’ಅಷ್ಟು ದಂಡ ಪಾವತಿಸಲು ಸಾಧ್ಯವಿಲ್ಲ’ ಎಂದಿರುವ ವೆಂಕಟರಾಮನ್, ‘ಬೇಕಿದ್ದರೆ ಸ್ಕೂಟರ್ ತೆಗೆದುಕೊಂಡು ಹೋಗುವಂತೆ’ ತಿಳಿಸಿದ್ದಾರೆ. ಆದರೆ ನಿಮ್ಮ ಸ್ಕೂಟರ್ ಬೇಡ, ದಂಡ ಪಾವತಿಸಿ, ಇಲ್ಲವಾರೆ ಪ್ರಕರಣ ದಾಖಲಿಸುವುದಾಗಿ ತಿಳಿಸಿರುವ ಸಂಚಾರ ಪೊಲೀಸರು ವಾಹನ ಮಾಲೀಕನಿಗೆ ನೊಟೀಸ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net