15ಕ್ಕೆ ದೇವನಹಳ್ಳಿ ರೈತರ ಜತೆ 2ನೇ ಸುತ್ತಿನ ಸಭೆ

siddaramaih
Published on

ಬೆಂಗಳೂರು : ದೇವನಹಳ್ಳಿ ಸಮೀಪ ಹೈಟೆಕ್ ಡಿಫೆನ್ಸ್‌ ಮತ್ತು ಏರೋಸ್ಪೇಸ್ ಪಾರ್ಕ್ ವಿರೋಧಿಸಿ ಹೋರಾಟನಿರತ ರೈತರ ಜತೆಗೆ ಜುಲೈ 15ರಂದು 2ನೇ ಸುತ್ತಿನ ಸಭೆ ಸರ್ಕಾರ ನಿರ್ಧರಿಸಿದೆ.

ಡಿಫೆನ್ಸ್‌ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ವಾಪಸ್ ರೈತರಿಗೆ ನೀಡಬೇಕೆಂದು ರೈತರು ಮತ್ತು ಕೆಲ ಸಂಘಟನೆಗಳು ಹೋರಾಟ ನಡೆಸುತ್ತಿವೆ. ವಿಧಾನಸೌಧದಲ್ಲಿ ಮೊದಲ ಸುತ್ತಿನ ಸಭೆ ನಡೆಸಲಾಯಿತು. ಆದರೇ, ಯಾವುದೇ ನಿರ್ಧರಕ್ಕೆ ಬಂದಿರಲಿಲ್ಲ.

ಆದರಿಂದ 2ನೇ ಸುತ್ತಿನ ಸಭೆಯನ್ನು ಜು.15ಕ್ಕೆ ನಿಗದಿಪಡಿಸಲಾಗಿದೆ. ಇದರ ನಡುವೆ ಸರ್ಕಾರ, ಹಿಂದಿನ ಕೋರ್ಟ್ ಆದೇಶಗಳು, ಕಾನೂನು ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದೆ. ರೈತರಿಗೆ ಹೆಚ್ಚಿನ ಪರಿಹಾರ ಕೊಟ್ಟು ಅವರ ಮನವೊಲಿಸಬೇಕೆಂದು ಪ್ರಯತ್ನ ಮಾಡುತ್ತಿದೆ. ಒಂದು ವೇಳೆ ಒಪ್ಪದೆ ಇದ್ದಾಗ ಅಷ್ಟು ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿ ಹಸಿರು ವಲಯ ಎಂದು ೋಷಣೆ ಮಾಡಲು ಸಹ ಚರ್ಚೆಗಳು ನಡೆದಿವೆ. ಇದರ ನಡುವೆ ಜು.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಭೆಯನ್ನು ಕರೆದಿದ್ದು, ಅಂತಿಮ ನಿರ್ಧರಕ್ಕೆ ಬರುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net