ರೋಗಿ ಹೊಟ್ಟೆಯಲ್ಲಿದ್ದ 29 ಚಮಚ, 16 ಟೂತ್​ ಬ್ರಷ್​ ಹಾಗೂ 2 ಪೆನ್​ ಹೊರ ತೆಗೆದ ವೈದ್ಯರು!

Untitled design - 2025-09-25T194609.532
Published on

ಮದ್ಯವ್ಯಸನ ಮುಕ್ತ ಕೇಂದ್ರದಲ್ಲಿದ್ದ ವ್ಯಕ್ತಿಯೊಬ್ಬರ ಹೊಟ್ಟೆಯಲ್ಲಿದ್ದ ಬರೊಬ್ಬರಿ 29 ಚಮಚ, 16 ಟೂತ್​ ಬ್ರಷ್​ ಹಾಗೂ 2 ಪೆನ್​ಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ​ ವೈದ್ಯರು ಹೊರ ತೆಗೆದ ಘಟನೆ ಉತ್ತರಪ್ರದೇಶದ ಗಾಜಿಯಬಾದ್​​ನಲ್ಲಿ ಬೆಳಕಿಗೆ ಬಂದಿದೆ.

ಹೌದು, ಇಲ್ಲಿನ ಹಾಪುರದ ನಿವಾಸಿ 35 ವರ್ಷದ ಸಚಿನ್ ಎಂಬುವವರು ಶಸ್ತ್ರ ಚಿಕಿತ್ಸೆಗೆ ಒಳಾಗಾದ ವ್ಯಕ್ತಿ. ಈತ ಮದ್ಯವ್ಯಸನಿಯಾಗಿದ್ದು, ಕುಡಿಯುವ ಚಟ ಬಿಡಿಸುವ ಉದ್ದೇಶದಿಂದ ಅವರ ಕುಟುಂಬದವರು ಇಲ್ಲಿನ ಹಾಪುರದ ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಕೆಲ ದಿನಗಳಿಂದೆ ಬಿಟ್ಟು ಹೋಗಿದ್ದರು.

ಸಚಿನ್​ ಹೇಳುವ ಪ್ರಕಾರ, "ಇಡೀ ದಿನದಲ್ಲಿ, ನಮಗೆ ಬಹಳ ಕಡಿಮೆ ತರಕಾರಿಗಳು ಮತ್ತು ಕೆಲವೇ ಚಪಾತಿಗಳನ್ನು ನೀಡಲಾಗುತ್ತಿತ್ತು. ಮನೆಯಿಂದ ಏನಾದರೂ ಬಂದರೆ, ಹೆಚ್ಚಿನವು ನಮಗೆ ತಲುಪುತ್ತಿರಲಿಲ್ಲ. ನಮಗೆ ಕೆಲವೊಮ್ಮೆ ಒಂದು ದಿನದಲ್ಲಿ ಒಂದು ಬಿಸ್ಕತ್ತು ಸಿಗುತ್ತಿತ್ತು" ಎಂದು ಆರೋಪಿಸಿದ್ದಾರೆ.

ಮೊದಲೇ ಕೋಪಿಷ್ಟನಾಗಿದ್ದ ಈತ ಅಲ್ಲಿನ ರೋಗಿಗಳಿಗೆ ನೀಡಲಾಗುತ್ತಿದ್ದ ಅಲ್ಪ ಪ್ರಮಾಣದ ಆಹಾರದಿಂದ ಇನ್ನಷ್ಟು ಕೋಪ ಹೆಚ್ಚಾಯಿತು. ಆಗ ಕೋಪಗೊಂಡ ವ್ಯಕ್ತಿ ಅಡುಗೆ ಮನೆಯಲ್ಲಿನ ಚಮಚಗಳನ್ನು ಕದ್ದು, ಸ್ನಾನಗೃಹಕ್ಕೆ ಹೋಗಿ, ಅವುಗಳನ್ನು ತುಂಡುಗಳಾಗಿ ಒಡೆದು, ಬಾಯಿಯಲ್ಲಿ ಇಟ್ಟು ಗಂಟಲಿನ ಒಳಗೆ ತಳ್ಳುತ್ತಿದ್ದನು ಎಂದು ವರದಿ ಉಲ್ಲೇಖಿಸಿದೆ.

ಕೆಲ ದಿನಗಳಲ್ಲಿಯೇ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್‌ಗಳು ಅವರ ಹೊಟ್ಟೆಯಲ್ಲಿ ಚಮಚಗಳು, ಹಲ್ಲುಜ್ಜುವ ಬ್ರಷ್‌ಗಳು ಮತ್ತು ಪೆನ್ನುಗಳು ಆಘಾತಕಾರಿಯಾಗಿ ಇರುವುದು ಕಂಡುಬಂದಿದೆ. ಇದೀಗ ಶಸ್ತ್ರಚಿಕಿತ್ಸೆಯ ಮೂಲಕ, 29 ಸ್ಟೀಲ್ ಚಮಚಗಳು, 19 ಹಲ್ಲುಜ್ಜುವ ಬ್ರಷ್‌ಗಳು ಮತ್ತು ಎರಡು ಪೆನ್ನುಗಳನ್ನು ಹೊರತೆಗೆದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net