28ರಂದು ಸನ್ಮಾನ ಕಾರ್ಯಕ್ರಮ

Drama
Published on

ಕರ್ನಾಟಕ ರಾಜ್ಯ ಸವಿತಾ ನಾದಬ್ರಹ್ಮ ಸಂಗೀತ ಕಲಾ ಸಂಘ, ಸವಿತಾ ವಿವಿಧೋದ್ದೇಶ ಸಹಕಾರ ಸಂಘಗಳ ಸಹಯೋಗದಲ್ಲಿ ಅ.28ರಂದು ಬೆಳಗ್ಗೆ 11ಕ್ಕೆ ಟಿ.ಕೆ.ಬಡಾವಣೆಯ ನಾಲ್ಕನೇ ಹಂತ ಪಿ-2 ಸಂಖ್ಯೆಯ ಕಟ್ಟಡದಲ್ಲಿ ಡಾ.ಎಂ.ಎಸ್.ಮುತ್ತುರಾಜ್ ಹಾಗೂ ಎಸ್.ನರೇಶ್ ಕುಮಾರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯದರ್ಶಿ ರಮೇಶ್ ತಿಳಿಸಿದರು.

ಕಾರ್ಯಕ್ರಮವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆ ವಹಿಸುವರು. ಡಾ.ಶುಶ್ರೂಷ್ ಗೌಡ, ಮಾಜಿ ಮೇಯರ್‌ಗಳಾದ ಶಿವಕುಮಾರ್, ಪುಷ್ಪಲತಾ ಚಿಕ್ಕಣ್ಣ, ಪಾಲಿಕೆ ಮಾಜಿ ಸದಸ್ಯ ಜೆ.ಗೋಪಿ, ಸವಿತಾ ಸುರೇಶ್, ಆರ್.ಆನಂದ್, ಎ.ಎಂ.ನಾಗರಾಜು ಇನ್ನಿತರರು ವೇದಿಕೆಯಲ್ಲಿರುವರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪದಾಧಿಕಾರಿಗಳಾದ ತ್ಯಾಗರಾಜು, ಮಧುಕುಮಾರ್, ಎ.ಎಂ.ನಾಗರಾಜು, ಮಂಜು ಕೆ.ಜಿ.ಕೊಪ್ಪಲು, ಧನರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net