

ಸಾಗರ: ಸಾಗರದ ಶೃಂಗೇರಿ ಶಂಕರಮಠದಲ್ಲಿ ಶ್ರೀ ಶಂಕರ ಭಗವತ್ಪಾದರ ಜಯಂತಿ ಕಾರ್ಯಕ್ರಮ ಏ.28ರಿಂದ ಮೇ 5ರವರೆಗೆ ನಡೆಯಲಿದೆ ಎಂದು ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ಶಂಕರಮಠದ ಬೆಳ್ಳಿಹಬ್ಬದ ಅಂಗವಾಗಿ, ಜಗದ್ಗುರುಗಳ ಪೀಠಾರೋಹಣದ ವಜ್ರಮಹೋತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
28ರಂದು ಬೆಳಗ್ಗೆ 8ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. 30ರಂದು ಶಂಕರಭಾಷ್ಯಾ, ಮೇ 1ರಂದು ಶತರುದ್ರ ಪಾರಾಯಣ, 2ರಂದು ನವಗ್ರಹಪೂರ್ವಕ ರುದ್ರಹವನ ಇರಲಿದೆ. ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ ಇರುತ್ತದೆ. ನಂತರ ಆದಿ ಶಂಕರಾಚಾರ್ಯರು ಶೃಂಗೇರಿ ಗುರು ಪರಂಪರೆ ವಿಷಯ ಕುರಿತು ವಿ.ಗಣೇಶ್ ಉಪನ್ಯಾಸ ನೀಡುವರು ಎಂದು ಹೇಳಿದರು.
ಸನಾತನ ಧರ್ಮ ಉಳಿಸಿ ಬೆಳೆಸುವ ಅಗತ್ಯವಿದೆ. ಈಗಾಗಲೇ ಶಂಕರಮಠ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಧರ್ಮ ಸಂಸ್ಥಾಪನೆಗೆ ವಿಶೇಷ ಒತ್ತು ನೀಡುತ್ತಿದೆ. ಶಂಕರ ಜಯಂತಿ ಅಂಗವಾಗಿ ಸನಾತನ ಧರ್ಮಕ್ಕೆ ಶ್ರೀ ಶಂಕರಾಚಾರ್ಯರ ಕೊಡುಗೆ ವಿಷಯ ಕುರಿತು ಪುರುಷರು, ಮಹಿಳೆಯರು, ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ಪ್ರಬಂಧವನ್ನು ಮೇ 5ರೊಳಗೆ ಕೆ.ಆರ್.ಕೃಷ್ಣಯ್ಯ, ಅಭಿಲಾಷ್, 2ನೇ ಕ್ರಾಸ್, ಸೊರಬ ರಸ್ತೆ, ಸುಭಾಷ್‌ನಗರ, ಸಾಗರ-577401 (ಮೊ. 9964383141) ಇವರಿಗೆ ಕಳಿಸಬೇಕು ಎಂದರು.
ಮಾ.ಸ.ನಂಜುಂಡಸ್ವಾಮಿ, ವಿನಾಯಕ ಜೋಯ್ಸ್, ಪ್ರಭಾವತಿ ವೆಂಕಟೇಶ್, ಪರಮಾತ್ಮ, ನೇತ್ರಾ ಉಡುಪ, ಕಸ್ತೂರಿ, ಜ್ಯೋತಿ ಹಾಜರಿದ್ದರು.