ದೇಶದೆಲ್ಲೆಡೆ ವೈದ್ಯಕೀಯ ಸಾಮಗ್ರಿ ಪೂರೈಸಿದ 'ಲೈಫ್​ಲೈನ್​ ಉಡಾನ್​' 274 ವಿಮಾನಗಳ ಸಂಚಾರ ನಿರ್ವಹಿಸಿದ ಸಚಿವಾಲಯ

Lifeline
Published on

ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿಮಾನ ಯಾನವನ್ನು ರದ್ದುಗೊಳಿಸಲಾಗಿದೆ. ಆದರೆ, ಈ ನಡುವೆ 274 ವಿಮಾನಗಳು ಹಾರಾಟ ನಡೆಸಿವೆ.

ವೈದ್ಯಕೀಯ ಅಗತ್ಯ ವಸ್ತುಗಳ ಸರಬರಾಜಿಗಾಗಿ ದೇಶದ ವಿವಿಧ ಭಾಗಗಳಿಗೆ ಕೇಂದ್ರ ವಿಮಾನಯಾನ ಸಚಿವಾಲಯ 274 ವಿಮಾನಗಳ ಸಂಚಾರವನ್ನು ನಿರ್ವಹಿಸಿದೆ.

ಕರೊನಾ ವಿರುದ್ಧ ಹೋರಾಟಕ್ಕಾಗಿ ದೇಶದ ಮೂಲೆಮೂಲೆಗೂ ಔಷಧ, ವೈದ್ಯಕೀಯ ವಸ್ತುಗಳು, ಸಾಧನಗಳ ಪೂರೈಕೆಗಾಗಿ ವಿಮಾನ ಯಾನ ಸಚಿವಾಲಯವು "ಲೈಫ್​​ಲೈನ್​ ಉಡಾನ್​" ಯೋಜನೆಯನ್ನು ಆರಂಭಿಸಿತ್ತು.

ಏರ್​ ಇಂಡಿಯಾ, ಅಲೈನ್ಸ್​ ಏರ್​, ಭಾರತೀಯ ವಾಯು ಸೇನೆ, ಇಂಡಿಗೋ ಹಾಗೂ ಸ್ಪೈಸ್​ ಜೆಟ್​ ವಿಮಾನ ಯಾನ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿದ್ದವು. ಮಾರ್ಚ್​ 26ರಿಂದ ಏಪ್ರಿಲ್​ 17ರವರೆಗೆ ಒಟ್ಟು 274 ವಿಮಾನಗಳು ಸಂಚಾರ ನಡೆಸಿದ್ದವು. ಏರ್​ ಇಂಡಿಯಾ-91, ಅಲೈನ್ಸ್​ ಏರ್​-84, ಭಾರತೀಯ ವಾಯು ಸೇನೆ 91 ಬಾರಿ ವಿಮಾನಗಳ ಹಾರಾಟ ನಡೆಸಿದೆ.

ಇದಲ್ಲದೇ, ವಿದೇಶಗಳಿಂದಲೂ ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ತರಲಾಗಿದೆ. ಏರ್​ ಇಂಡಿಯಾ ಇದಕ್ಕಾಗಿ ಏರ್​ಬ್ರಿಜ್​ ಯೋಜನೆ ರೂಪಿಸಿತ್ತು. ಚೀನಾ, ಹಾಂಗ್​ಕಾಂಗ್​, ಕೊರಿಯಾದಿಂದ 207 ಟನ್​ಗಳಷ್ಟು ವೈದ್ಯಕೀಯ ಸಾಮಗ್ರಿಯನ್ನು ಭಾರತಕ್ಕೆ ತರಲಾಗಿದೆ. ಇದಲ್ಲದೆ, ಫ್ರಾನ್ಸ್ನ​ ಫ್ರಾಂಕ್​ಫರ್ಟ್​ಗೆ ಕೃಷಿ ಸಾಮಗ್ರಿಗಳನ್ನು ಸಾಗಿಸಿ ಅಲ್ಲಿಂದ 10 ಟನ್​ಗಳಷ್ಟು ಸಾಮಗ್ರಿ ಮರಳಿ ತರಲಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯ ಮಾಹಿತಿ ನೀಡಿದೆ.

ದೇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net