26ರಂದು ಅವರೇಕಾಳು ಮುದ್ದೆ ಅನ್ನಸಂತರ್ಪಣೆ

tavarekere
Published on

ಮಂಡ್ಯ ಮೂಲದ ಮೈಸೂರು ನಿವಾಸಿಗಳು ಹಾಗೂ ಪುಣ್ಯಕೋಟಿ ಸೇವಾ ಟ್ರಸ್ಟ್ ವತಿಯಿಂದ ಜು.26ರ ಮೊದಲ ಶ್ರಾವಣ ಶನಿವಾರದಂದು ಮಧ್ಯಾಹ್ನ 12ಕ್ಕೆ ವಿಜಯನಗರದ ಯೋಗನರಸಿಂಹಸ್ವಾಮಿ ದೇವಸ್ಥಾನದ ಬಳಿ ಅವರೇಕಾಳು ಮುದ್ದೆ ಊಟದ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಹನುಮಂತೇಶ್ ತಿಳಿಸಿದರು.

ಪ್ರೊ.ಭಾಷ್ಯಂ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಮೈಸೂರು ಹಾಗೂ ಮಂಡ್ಯ ಭಾಗದ ಜನಪ್ರತಿನಿಧಿಗಳು ಹಾಜರಿರುವರು. ಈ ವೇಳೆ ಸುಮಾರು 10 ಸಾವಿರ ಜನರಿಗೆ ಊಟ ಬಡಿಸಲಾಗುವುದು. ಈಚಿನ ದಿನಗಳಲ್ಲಿ ಎಲ್ಲರೂ ಗ್ರಾಮೀಣ ಸೊಗಡಿನ, ಹೆಚ್ಚು ಪೌಷ್ಟಿಕಾಂಶದ ಊಟ ಮರೆಯುತ್ತಿದ್ದಾರೆ. ಹೀಗಾಗಿ ಇವರಿಗೆ ಈ ಕುರಿತು ಅರಿವು ಮೂಡಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಪಾಂಡವಪುರದ ಎಂ.ಪುಟ್ಟಸ್ವಾಮಿ, ಕೆ.ಆರ್.ಪೇಟೆಯ ರಾಮಚಂದ್ರು, ಮಳವಳ್ಳಿಯ ಮಂಜೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net