ಕಂದಕಕ್ಕೆ ಬಿದ್ದ ಬಸ್; 26 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

road
ಸಾಂದರ್ಭಿಕ ಚಿತ್ರ
Published on

ಲಿಮಾ: ದಕ್ಷಿಣ ಪೆರುವಿನಲ್ಲಿ ಮಂಗಳವಾರ ಬಸ್ಸೊಂದು ಕಂದರಕ್ಕೆ ಉರುಳಿ ಭೀಕರ ​ಅಪಘಾತ ಸಂಭವಿಸಿದೆ. ಈ ಬಸ್​​ನಲ್ಲಿದ್ದ ಸುಮಾರು 26 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ಪೆರುವಿನ ಆಂಡಿಸ್​​ ಪರ್ವತ ಶ್ರೇಣಿಯಲ್ಲಿ ಸಂಚರಿಸುತ್ತಿದ್ದ ಬಸ್​ ಅಪಘಾತಕ್ಕೀಡಾಗಿದೆ.

ಬಸ್​​ 656 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಇಷ್ಟೊಂದು ಸಾವು-ನೋ​ವು ಸಂಭವಿಸಿದೆ. ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಸುಮಾರು 40 ಮಂದಿ ಪ್ರಯಾಣಿಕರನ್ನು ಬಸ್​ ಹೊತ್ತು ಸಾಗುತ್ತಿತ್ತು ಎನ್ನಲಾಗಿದೆ.

ಬಸ್​​ ರಾಜಧಾನಿ ಲಿಮಾದಿಂದ ಅಯಾಕುಚೊಗೆ ತೆರಳುತ್ತಿತ್ತು. ಮುಂಜಾನೆ ಈ ಅಪಘಾತ ಸಂಭವಿಸಿದೆ. ಈಗಾಗಲೇ ಗಾಯಗೊಂಡವನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೆರುವಿನ ಆಗಾಗ್ಗೆ ಅಂಕುಡೊಂಕಾದ, ಪರ್ವತ ರಸ್ತೆಗಳಲ್ಲಿ ವೇಗ, ಕಳಪೆ ರಸ್ತೆ ನಿರ್ವಹಣೆ, ಟ್ರಾಫಿಕ್ ಚಿಹ್ನೆಗಳ ಕೊರತೆ ಮತ್ತು ಚಾಲನಾ ನಿಯಮಗಳ ಸಡಿಲವಾದ ಜಾರಿಯಿಂದಾಗಿ ಅಪಘಾತಗಳು ಆಗಾಗ್ಗೆ ಸಂಭವಿಸುತ್ತವೆ. ಮೇ ತಿಂಗಳಲ್ಲಿ ಇದೇ ರಸ್ತೆಯಲ್ಲಿ  ಬಸ್ ಅಪಘಾತದಲ್ಲಿ 17 ಜನರು ಸಾವನ್ನಪ್ಪಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net