25 ರಂದು ಮೈಸೂರು ಪರಂಪರೆ ಬಿಂಬಿಸುವ “ಮೈಸೂರು ಸಿಲ್ಕ್ ಸೀರೆ ಮತ್ತು ಮೈಸೂರು ಮಲ್ಲಿಗೆ ಧರಿಸಿ” ವಾಕಥಾನ್ ಕಾರ್ಯಕ್ರಮ

DASARA_TMK
Published on

ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ವತಿಯಿಂದ -2025ರ ಅಂಗವಾಗಿ ಸೆಪ್ಟೆಂಬರ್ 25 ರಂದು ಮಹಿಳೆಯರಿಂದ ಮೈಸೂರು ಪರಂಪರೆ ಬಿಂಬಿಸುವ “ಮೈಸೂರು ಸಿಲ್ಕ್ ಸೀರೆ ಮತ್ತು ಮೈಸೂರು ಮಲ್ಲಿಗೆ ಧರಿಸಿ” ವಾಕಥಾನ್ ಕಾರ್ಯಕ್ರಮವನ್ನು ಅರಮನೆಯ ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದಿಂದ ಕೆ.ಆರ್, ಸರ್ಕಲ್, ಸಯ್ಯಜಿರಾವ್ ರಸ್ತೆ, ಧನ್ವಂತರಿ ರಸ್ತೆ ಮಾರ್ಗವಾಗಿ ಜೆ.ಕೆ ಮೈದಾನದವರೆಗೆ ವಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಆಸಕ್ತ ಮಹಿಳೆಯರು “ಮೈಸೂರು ಸಿಲ್ಕ್ ಸೀರೆ ಮತ್ತು ಮೈಸೂರು ಮಲ್ಲಿಗೆ ಮುಡಿದು” ಸೆಪ್ಟೆಂಬರ್ 25 ರಂದು ಬೆಳಗ್ಗೆ 10 ಗಂಟೆಗೆ ಕೋಟೆ ಅಚಿಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಭಾಗವಹಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ದಸರಾ-2025 ರ ಉಪ ಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net