

ಬೆಂಗಳೂರು: ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿಗೆ 25 ಲಕ್ಷ ರೂ. ಎಂದು ಬಿಳಿ ಕಾಗದ ಕೊಟ್ಟು ವಂಚನೆ ಮಾಡಿದ್ದಾರೆ. ವಿವಿ ಪುರ ನಿವಾಸಿ ಪ್ರೇಮಕುಮಾರ್ ಜೈನ್ ಮೋಸಕ್ಕೆ ಒಳಗಾದ ವ್ಯಾಪಾರಿ. ಇವರು ಕೊಟ್ಟ ದೂರಿನ ಮೇರೆಗೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಪೇಟೆಯ ಲಾಲ್ ಬಿಲ್ಡಿಂಗ್‌ನಲ್ಲಿ ರೆಡಿಮೇಡ್ ಬಟ್ಟೆ ವ್ಯಾಪಾರಿ ಪ್ರೇಮಕುಮಾರ್, ತುರ್ತು ಹಣ ಬೇಕಾದ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಸ್ನೇಹಿತನ ಬಳಿ 25 ಲಕ್ಷ ರೂ. ಸಾಲ ಕೇಳಿದ್ದರು. ಹಣ ಕೊಡಲು ಒಪ್ಪಿದಾಗ ಹೋಗಿ ತರಲು ಸಾಧ್ಯವಾಗಿರಲಿಲ್ಲ. ಆದರಿಂದ ಜಯೇಷ್ ಎಂಬಾತ ದೆಹಲಿಯಲ್ಲಿ ನಿಮ್ಮ ಸ್ನೇಹಿತರು ನಮ್ಮ ಹುಡುಗರಿಗೆ 25 ಲಕ್ಷ ರೂ. ಕೊಟ್ಟರೆ ಬೆಂಗಳೂರಿನಲ್ಲಿ ನಿಮಗೆ 25 ಲಕ್ಷ ರೂ. ಕೊಡುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಒಪ್ಪಿದಾಗ ಜೂನ್ 14ರ ಸಂಜೆ 4.30ರಲ್ಲಿ ಜಯೇಷ್, ಕರೆ ಮಾಡಿ ನಗರ್ತ್‌ಪೇಟೆ ಜೈನ್ ದೇವಸ್ಥಾನ ಬಳಿಗೆ ಬರುವಂತೆ ಪ್ರೇಮಕುಮಾರ್‌ಗೆ ಸೂಚಿಸಿದ್ದರು.
ಅಲ್ಲಿಗೆ ಬಟ್ಟೆ ವ್ಯಾಪಾರಿ ಹೋದಾಗ ಜಯೇಷ್, ಬ್ಯಾಗ್‌ನಲ್ಲಿ 500 ರೂ. ಮುಖ ಬೆಲೆಯ ಬಂಡಲ್ ತೋರಿಸಿ ಇದರಲ್ಲಿ 25 ಲಕ್ಷ ರೂ. ಇದೆ. ದೆಹಲಿಯಲ್ಲಿ ನಿಮ್ಮ ಸ್ನೇಹಿತರ ಬಳಿಗೆ ನಮ್ಮಹುಡುಗರು ಹೋಗಿದ್ದಾರೆ. ನೀವು ೆನ್ ಕರೆ ಮಾಡಿ ಹೇಳಿದರೆ ಅವರು 25 ಲಕ್ಷ ರೂ. ಕೊಡುತ್ತಾರೆ. ಇಲ್ಲಿ ನಿಮಗೆ ಹಣ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಆಗ ಪ್ರೇಮಕುಮಾರ್, ದೆಹಲಿಯ ತನ್ನ ಸ್ನೇಹಿತರಿಗೆ ಕರೆ ಮಾಡಿ ಹಣ ಕೊಡುವಂತೆ ಹೇಳಿದ್ದಾರೆ. ಬಳಿಕ ಜಯೇಷ, ಬಟ್ಟೆ ವ್ಯಾಪಾರಿಗೆ 25 ಲಕ್ಷ ರೂ.ಇರುವುದಾಗಿ ಬ್ಯಾಗ್ ಕೊಟ್ಟು ಅಲ್ಲಿಂದ ಪರಾರಿ ಆಗಿದ್ದಾನೆ. ಜನದಟ್ಟಣೆ ಇದ್ದ ಕಾರಣಕ್ಕೆ ಹಣ ಏಣಿಸಿಕೊಳ್ಳದೆ ಅಲ್ಲಿಂದ ಮನೆಗೆ ಹೋಗಿ ವ್ಯಾಪಾರಿ ಹಣ ಏಣಿಸಿಕೊಂಡಾಗ ಬಂಡಲ್ ಮೇಲಿನ ನೋಟು ಅಸಲಿ ಆಗಿದ್ದು, ಒಳ ಜೆರಾಕ್ಸ್ ನೋಟುಗಳು ಆಗಿದ್ದವು. ತಕ್ಷಣ ಜಯೇಷಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಲಭ್ಯವಾಗಿಲ್ಲ.
ದೆಹಲಿಯ ತನ್ನ ಸ್ನೇಹಿತನಿಗೆ ಬಟ್ಟೆ ವ್ಯಾಪಾರಿ ಕರೆ ಮಾಡಿದಾಗ, ಅಪರಿಚಿತ ಹುಡುಗರಿಗೆ ಹಣ ಕೊಟ್ಟಿರುವುದಾಗಿ ಖಚಿತ ಪಡಿಸಿದ್ದಾರೆ. ಮೋಸ ಮಾಡುವ ಉದ್ದೇಶಕ್ಕೆ ಹಣ ವರ್ಗಾವಣೆ ಮಾಡಿಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರು ಸಲ್ಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.