ಸ್ಮಾರ್ಟ್ ಸಿಟಿ ಉಪಕ್ರಮ: ಪುದುಚೇರಿಯಲ್ಲಿ 25 ಪರಿಸರಸ್ನೇಹಿ ಬಸ್‌ಗಳ ಸೇವೆ ಆರಂಭ

ಬಸ್_
Published on

ಪುದುಚೇರಿ: ಸುಸ್ಥಿರ ಇಂಗಾಲ ನಿಯಂತ್ರಿತ ನಗರವಾಗಿಸುವ ನಿಟ್ಟಿನ ಮಹತ್ವದ ಹೆಜ್ಜೆಯಾಗಿ, ಪುದುಚೇರಿ ರಸ್ತೆ ಸಾರಿಗೆ ನಿಗಮ (ಪಿಆರ್‌ಟಿಸಿ) ಒಲೆಕ್ಟ್ರಾ ತಯಾರಿಸಿದ 25 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಇದೀಗ ಅಧಿಕೃತವಾಗಿ ಚಾಲನೆ ನೀಡಿದೆ.

ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕೆ. ಕೈಲಾಶನಾಥನ್, ಮುಖ್ಯಮಂತ್ರಿ ಎನ್. ರಂಗಸಾಮಿ ಮತ್ತು ಸ್ಪೀಕರ್ ಆರ್. ಸೆಲ್ವಂ ಅವರು ಹಿರಿಯ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಈ ನೂತನ ಪರಿಸರ ಸ್ನೇಹಿ ಬಸ್‌ಗಳಿಗೆ ಔಪಚಾರಿಕವಾಗಿ ಹಸಿರು ನಿಶಾನೆ ತೋರಿದರು. ಈ ಸೇವೆಗಳು ಪುದುಚೇರಿ ಸರ್ಕಾರದ ಸ್ಮಾರ್ಟ್ ಸಿಟಿ ಉಪಕ್ರಮದ ಅಡಿಯಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಇದು ಸ್ವಚ್ಛ, ದಕ್ಷ ಮತ್ತು ಆಧುನಿಕ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

ಈ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಇವಿ ಬಸ್‌ಗಳ ಉತ್ಪಾದನೆಯ ದೇಶೀಯ ಸಂಸ್ಥೆಯಾಗಿರುವ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್‌ನಿಂದ ತಯಾರಿಸಲಾಗಿದೆ. ಪ್ರತಿಯೊಂದೂ 9 ಮೀ. ಉದ್ದವಿದ್ದು, ಪ್ರಯಾಣಿಕರಿಗೆ ಆರಾಮದಾಯಕ, ಶಬ್ದ-ಮುಕ್ತ ಮತ್ತು ಶೂನ್ಯ-ಹೊರಸೂಸುವಿಕೆ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ ವಿಶೇವಾಗಿ ಡಿಸೈನ್ ಮಾಡಲಾಗಿದೆ. ಪ್ರತಿ ಬಸ್ ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ. ವರೆಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಬಸ್‌ಗಳನ್ನು 12 ವರ್ಷಗಳ ಅವಧಿಗೆ ಎಂ.ಇ.ಐ.ಎಲ್ ಗ್ರೂಪ್ ಕಂಪನಿಯಾದ ಈವೇ ಟ್ರಾನ್ಸ್ ಪ್ರೈವೇಟ್ ಲಿಮಿಟೆಡ್, ಒಟ್ಟು ವೆಚ್ಚದ ಒಪ್ಪಂದ ಅಂದರೆ ಜಿಸಿಸಿ ಮಾದರಿಯಡಿಯಲ್ಲಿ ನಿರ್ವಹಿಸುವ ಹೊಣೆಗಾರಿಕೆಯನ್ನು ಹೊತ್ತಿದೆ.

ಈ ಕುರಿತು ಮಾತನಾಡಿದ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಾಬು, “ಸುಸ್ಥಿರ ಚಲನಶೀಲತೆಯ ಮೂಲಕ ಸ್ಮಾರ್ಟ್ ಸಿಟಿ ಮಿಷನ್ ಮುನ್ನಡೆಸುವಲ್ಲಿ ಪುದುಚೇರಿ ಸರ್ಕಾರ ಮತ್ತು ಪಿಆರ್‌ಟಿಎಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಮಗೆ ಸಂತಸವಿದೆ. ಈ ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆಯು ಭಾರತಕ್ಕೆ ಸ್ವಚ್ಛ ಮತ್ತು ಹಸಿರು ಸಾರಿಗೆ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಒಲೆಕ್ಟ್ರಾದ ಬದ್ಧತೆಗೆ ಸಾಕ್ಷಿ. ಈ ಉಪಕ್ರಮವನ್ನು ನಿಜವಾಗಿಸುವಲ್ಲಿ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಪುದುಚೇರಿಯ ಆಡಳಿತಕ್ಕೆ ಹೃತ್ಪೂರ್ವಕ ಕೃತಜ್ಞತೆ ತಿಳಿಸುವೆ” ಎಂದರು.

ಈ ಯೋಜನೆಯನ್ನು ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಜಾರಿಗೆ ತರಲಾಗಿದ್ದು, ಒಲೆಕ್ಟ್ರಾ ಬಸ್‌ಗಳನ್ನು ಪೂರೈಸುತ್ತದೆ ಮತ್ತು ಈವೇ ಟ್ರಾನ್ಸ್ ಕಾರ್ಯಾಚರಣೆಗಳು, ನಿರ್ವಹಣೆ ಮತ್ತು ಚಾರ್ಜಿಂಗ್ ಅನ್ನು ನಿರ್ವಹಿಸುತ್ತದೆ. ಈ ವರ್ಷದ ಆರಂಭದಲ್ಲಿ, ಸಾರಿಗೆ ಅಧಿಕಾರಿಗಳು ಬಸ್‌ಗಳನ್ನು ಪರಿಶೀಲಿಸಿ, ಅನುಮೋದಿಸಿದರು. ಇದು ಯಶಸ್ವಿ ನಿಯೋಜನೆಗೆ ದಾರಿ ಮಾಡಿಕೊಟ್ಟಿದೆ. ಈ ಸೇರ್ಪಡೆಯೊಂದಿಗೆ, ಪುದುಚೇರಿ ಒಲೆಕ್ಟ್ರಾದ ಹಸಿರು ಚಲನಶೀಲತೆ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಭಾರತೀಯ ನಗರಗಳ ಬೆಳೆಯುತ್ತಿರುವ ಪಟ್ಟಿಗೆ ಸೇರಿದೆ.

ಇದು ಶುದ್ಧ ಇಂಧನ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆಗೆ ತನ್ನ ಬದ್ಧತೆಯನ್ನು ಒತ್ತಿ ಹೇಳಿದೆ. ದೇಶಾದ್ಯಂತ ಒಲೆಕ್ಟ್ರಾ ಒಟ್ಟಾರೆಯಾಗಿ 440 ಮಿಲಿಯನ್ ಕಿ.ಮೀ.ಗಿಂತ ಹೆಚ್ಚು ಕ್ರಮಿಸಿದೆ, ಇದರ ಪರಿಣಾಮವಾಗಿ ಸುಮಾರು 135.4 ಮಿಲಿಯನ್ ಲೀಟರ್‌ಗಳಷ್ಟು ಡೀಸೆಲ್ ಬಳಕೆ ಮತ್ತು ಸುಮಾರು 362.8 ಮಿಲಿಯನ್ ಕಿಲೋ ಗ್ರಾಂ.ನಷ್ಟು ಇಂಗಾಲ ಹೊರಸೂಸುವಿಕೆ ಕಡಿಮೆಯಾಗಿದೆ. ಇದು 16.8 ಮಿಲಿಯನ್ ಮರಗಳನ್ನು ನೆಡುವುದಕ್ಕೆ ಸಮನಾಗಿದೆ.

ಸಾರ್ವಜನಿಕ ಹಸಿರು ಸಾರಿಗೆಯತ್ತ ಪ್ರಮುಖ ಹೆಜ್ಜೆ

2000 ಇಸಿವಿಯಲ್ಲಿ ಸ್ಥಾಪನೆಯಾದ ಒಲೆಕ್ಟ್ರಾ ಗ್ರೀನ್ಟೆಕ್ ಲಿಮಿಟೆಡ್, ಎಂ.ಇ.ಐ.ಎಲ್​ನ ಸಮೂಹ ಸಂಸ್ಥೆಗಳಲ್ಲಿ ಒಂದಾಗಿದೆ. ಓಲೆಕ್ಟ್ರಾ 2015ರಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ಬಸ್​ಗಳನ್ನು ಪರಿಚಯಿಸುವಲ್ಲಿ ಪ್ರವರ್ತಕವಾಯಿತು. ಇದು ದೇಶದ ಪ್ರಮುಖ ಎಲೆಕ್ಟ್ರಿಕ್ ಬಸ್​ಗಳ ತಯಾರಕ ಮತ್ತು ಹಸಿರು ಚಲನಶೀಲತೆ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲಗಳಿಗಾಗಿ ಭಾರತದ ಅತಿದೊಡ್ಡ ಸಿಲಿಕೋನ್ ರಬ್ಬರ್/ ಸಂಯೋಜಿತ ಇನ್ಸುಲೇಟರ್ಗಳ ತಯಾರಕವಾಗಿದೆ.

ಎಂಇಐಎಲ್ ಗ್ರೂಪ್​ನ ಭಾಗವಾಗಿ, ಒಲೆಕ್ಟ್ರಾದ ಎಲೆಕ್ಟ್ರಿಕ್ ಬಸ್​ಗಳು ಪ್ರಸ್ತುತ 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, 75ಕ್ಕೂ ಅಧಿಕ ನಗರಗಳಲ್ಲಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿವೆ. ಸಂಸ್ಥೆಯು 3,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಯಶಸ್ವಿಯಾಗಿ ವಿತರಿಸಿದೆ ಮತ್ತು ಸುಸ್ಥಿರ ನಾವೀನ್ಯತೆಯ ಮೂಲಕ ಭಾರತದ ಸಾರ್ವಜನಿಕ ಸಾರಿಗೆ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net