

ಬೆಂಗಳೂರಿನ ಭಾರತೀಯ ಖಗೋಳ ಭೌತ ವಿಜ್ಞಾನ ಸಂಸ್ಥೆ, ನಗರದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋಗದಲ್ಲಿ ಮೈಸೂರು ವಿಜ್ಞಾನ ನಾಟಕೋತ್ಸವ ಸಮಿತಿ ವತಿಯಿಂದ ಜು.24 ರಿಂದ 27ರವರೆಗೆ ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ಮೈಸೂರು ವಿಜ್ಞಾನ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಸದಸ್ಯ ಮಾಧವ ಖರೆ ತಿಳಿಸಿದರು.
ಜು.24ರಂದು ಸಂಜೆ 4.30ಕ್ಕೆ ವಿಜ್ಞಾನಿ ಹಾಗೂ ಸಂಗೀತಗಾರ್ತಿ ಡಾ.ಅನ್ನಪೂರ್ಣ ಸುಬ್ರಹ್ಮಣ್ಯ ಉದ್ಘಾಟಿಸುವರು. ಇಂಗ್ಲಿಷ್ ನಾಟಕಕಾರ ನೀಲಾಂಜನ್ ಚೌಧರಿ ಆಶಯ ಭಾಷಣ ಮಾಡುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಳಿಕ ಗಣಿತ ಕುಣಿತ, ಸೂರ್ಯಕಲೆ ವೀಕ್ಷಣೆ, ಸಂಜೆ 6.30ಕ್ಕೆ ‘ದಿ ಟ್ರಯಲ್ ಆಫ್ ಅಬ್ದುಸ್ ಸಲಾಮ್’ ಇಂಗ್ಲಿಷ್ ನಾಟಕ, 25ರಂದು ಸಂಜೆ 6.30ಕ್ಕೆ ‘ಹಸಿವು’ ಕನ್ನಡ ನಾಟಕ, 26ರಂದು ಸಂಜೆ 6.30ಕ್ಕೆ ‘ರಾಮನ್: ಬೆಳಕು, ಶಬ್ದ, ಸಿಡಿಲು’ ನಾಟಕ, 27ರಂದು ಸಂಜೆ 6.30ಕ್ಕೆ ‘ಮೂರನೇ ಕಿವಿ’ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ. ಪ್ರತಿ ದಿನವೂ ಗಣಿತದ ಆಟಿಕೆ ಪ್ರದರ್ಶನ, ಪುಸ್ತಕ ಹಾಗೂ ಭಾರತೀಯ ಮಹಿಳಾ ವಿಜ್ಞಾನಿಗಳ ಪೋಸ್ಟರ್ ಪ್ರದರ್ಶನವಿರಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೊಳ್ಳೇಗಾಲ ಶರ್ಮ, ಅಮೋಘ್ ವರ್ಷ ಇತರರು ಇದ್ದರು.