24ರಂದು ತಾಲೂಕು ಕಚೇರಿಗೆ ಮುತ್ತಿಗೆ

19 mbl ph 3
Published on

ಮುಳಬಾಗಿಲು: ತಾಲೂಕಿನಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಆಸ್ತಿಗಳು, ಕೆರೆ-ಕುಂಟೆಗಳನ್ನು ಸರ್ವೇ ಮಾಡಿ ಮರುವಶಕ್ಕೆ ಪಡೆಯಲು ವಿಶೇಷ ತಂಡ ರಚಿಸಬೇಕು. ಇಲ್ಲವಾದಲ್ಲಿ ಶುಕ್ರವಾರ (ಜೂ.24)ಕೋಳಿಗಳ ಸಮೇತ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ರೈತ ಸಂದ ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಸರ್ಕಾರಿ ಆಸ್ತಿಗಳ ಒತ್ತುವರಿ ಬಗ್ಗೆ ದಾಖಲೆಗಳ ಸಮೇತ ದೂರು ನೀಡಿ 3 ತಿಂಗಳಾಗಿದ್ದರೂ ಒತ್ತುವರಿ ತೆರವಿಗೆ ಕಂದಾಯ ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ. ಸರ್ಕಾರದ ಸಂಬಳ ಪಡೆದು ಜನಸಾಮಾನ್ಯರ ಕೆಲಸ ಮಾಡದೆ ರಿಯಲ್​ ಎಸ್ಟೇಟ್​ ದಂಧೆ ಮುಖಾಂತರ ಅಧಿಕಾರಿಗಳೇ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ರೈತ ಸಂದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್​ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂದ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಮಾತನಾಡಿ, ತಾಲೂಕು ಆಡಳಿತ ದಲ್ಲಾಳಿಗಳು ಹಾಗೂ ರಿಯಲ್​ ಎಸ್ಟೇಟ್​ ಉದ್ದಿಮೆಗಳಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಕೆಲಸಗಳಿಗೆ ತಿಂಗಳಾನುಗಟ್ಟಲೆ ಜನಸಾಮಾನ್ಯರು ಇಲಾಖೆಗೆ ಅಲೆದಾಡಿದರೂ ಕೆಲಸವಾಗುವುದಿಲ್ಲ. ದಲ್ಲಾಳಿಗಳಿಗೆ ಹಣ ನೀಡಿದ ಒಂದು ತಾಸಿನಲ್ಲಿ ಎಲ್ಲ ಅಧಿಕಾರಿಗಳು ಕೆಲಸ ಮಾಡುವ ಮಟ್ಟಕ್ಕೆ ತಾಲೂಕು ಆಡಳಿತ ಹದಗೆಟ್ಟಿದೆ ಎಂದು ಆರೋಪ ಮಾಡಿದರು.

ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ವಿಭಾಗೀಯ ಕಾರ್ಯದರ್ಶಿ ಪಾರುಕ್​ಪಾಷ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮುಖಂಡರಾದ ರಾಮಮೂರ್ತಿ, ಜಗನ್​, ಶ್ರೀಕಾಂತ್​, ಪೊಂಬರಹಳ್ಳಿ ನವೀನ್​, ಪದ್ಮಟ್ಟ ಧರ್ಮ, ನಂಗಲಿ ಕಿಶೋರ್​, ಅಣ್ಣೆಹಳ್ಳಿ ನಾಗರಾಜ, ಸೋಮು, ರಾಜ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net