ಹಾಲಿ ಮತ್ತು ಮಾಜಿ ಯೋಧರಿಗೆ ಕರೊನಾ ಸೋಂಕು; ದೆಹಲಿಯಲ್ಲಿ ಚಿಕಿತ್ಸೆ

army
Published on

ನವದೆಹಲಿ: ಹಾಲಿ ಮತ್ತು ಮಾಜಿ ಯೋಧರಿಗೆ ಕರೊನಾ ಸೋಂಕು ತಗುಲಿದೆ. ಇವರೆಲ್ಲರೂ ದೆಹಲಿಯ ಸೇನಾಪಡೆ ಸಂಶೋಧನೆ ಮತ್ತು ರೆಫೆರಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಟ್ಟು 24 ಜನರಿಗೆ ಸೋಂಕು ತಗುಲಿರುವುದು ಮಂಗಳವಾರ ಖಚಿತವಾಯಿತು. ತಕ್ಷಣವೇ ಅವರೆಲ್ಲರನ್ನೂ ಬೇಸ್​ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.

ಇವರೆಲ್ಲರೂ ದೆಹಲಿಯ ಕಂಟೋನ್ಮೆಂಟ್​ ಏರಿಯಾದಲ್ಲಿ ವಾಸವಾಗಿದ್ದರು. ಸೇನಾಪಡೆ ಆಸ್ಪತ್ರೆಯ ಕ್ಯಾನ್ಸರ್​ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರೆಲ್ಲರನ್ನೂ ತಕ್ಷಣವೇ ಐಸೋಲೇಷನ್​ ವಾರ್ಡ್​ಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಆಸ್ಪತ್ರೆಯ ಸಿಬ್ಬಂದಿಗೆ ಯಾರಿಗೂ ಸೋಂಕು ತಗುಲಿಲ್ಲ ಎಂಬುದು ಖಚಿತವಾಗಿರುವುದಾಗಿ ಸೇನಾಪಡೆ ಮೂಲಗಳು ಹೇಳಿವೆ.

ಭಾರತೀಯ ಸೇನಾಪಡೆಯಲ್ಲಿ ಮಾರ್ಚ್​ನಲ್ಲೇ ಕೆಲ ಯೋಧರಿಗೆ ಕರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿನ ಬಗ್ಗೆ ಎಚ್ಚರದಿಂದ ಇರುವಂತೆ ಸೇನಾಪಡೆ ಅಧಿಕಾರಿಗಳು ಸೇನೆಯ ಎಲ್ಲ ಘಟಕಗಳಿಗೂ ಸೂಚನೆ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net