

Gold Price: ಟ್ರಂಪ್ ಪ್ರತೀಕಾರದ ಸುಂಕ ಹೊರೆ ಜಗತ್ತಿನ ಮೇಲೆ ಪರಿಣಾಮ ಬೀರಿದ್ದೇ ತಡ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಬದಲಾವಣೆಗಳು ಶುರುವಾಗಿವೆ. ಕಳೆದ ವಾರ ದರದಲ್ಲಿ ಸತತವಾಗಿ ಏರಿಕೆಯನ್ನೇ ಕಂಡಿದ್ದ ಚಿನ್ನ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸುಂಕ ವಿಧಿಸಿದ ಬೆನ್ನಲ್ಲೇ ಬೆಲೆ ಕುಸಿಯಲು ಪ್ರಾರಂಭಿಸಿದೆ. ಹಾಗಿದ್ದರೆ, ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ? ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿತ ಕಾಣಲಿದ್ಯಾ? ವಿಪರೀತ ಕುಸಿತದಿಂದ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ 55 ಸಾವಿರ ರೂ.ಗೆ ಬಂದಿಳಿಯಲಿದೆಯೇ ಎಂಬ ಪ್ರಶ್ನೆಗಳಿಗೆ ಶೀಘ್ರವೇ ಸಿಗಲಿದೆ ಉತ್ತರ.
ಚಿನ್ನ ಖರೀದಿಸಲು ಸಿದ್ಧರಾಗುತ್ತಿದ್ದೀರಾ? ಹಾಗಿದ್ದರೆ, ಇದು ನಿಮಗೆ ಸೂಕ್ತ ಸಮಯವಲ್ಲ. ಈ ಸುದ್ದಿ ಖಂಡಿತ ನಿಮಗೆ ಅಚ್ಚರಿ ಮೂಡಿಸುವುದರಲ್ಲಿ ಅನುಮಾನವಿಲ್ಲ. ಕಾರಣ, ಇಂದು ಚಿನ್ನದ ದರ ಕೇವಲ ಒಂದು ದಿನದಲ್ಲಿ ಭಾರಿ ಏರಿಕೆ ಕಂಡಿದೆ. ನೂರು ರೂ.ಗಳ ಅಂತರದಲ್ಲಿ ಅಲ್ಲ. ಬದಲಿಗೆ ಏಕಾಏಕಿ ಸಾವಿರಾರು ರೂ.ಗಳಲ್ಲಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚಿನ್ನದ ದರ ಈಗ ಮತ್ತಷ್ಟು ಏರಿಕೆಯಾಗಿದೆ.
ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಕಾಣುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಇಂದು (ಏ.10) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 2,940 ರೂ. ಹೆಚ್ಚಳವಾಗಿದೆ. ಅಂದಾಜು 3000 ರೂ.ಗೆ ಸಮೀಪ. 22 ಕ್ಯಾರೆಟ್ ಚಿನ್ನದ 2,700 ರೂ.ಗೆ ಏರಿಕೆಯಾಗಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ದುಬಾರಿಯಾಗಿದೆ. ಪ್ರತಿ ಕೆಜಿ ಬೆಳ್ಳಿಗೆ 2,000 ರೂ. ಜಾಸ್ತಿಯಾಗಿದೆ. ಮತ್ತೊಂದೆಡೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೂ ಕ್ರಮೇಣವಾಗಿ ಏರಿಕೆಯಾಗುತ್ತಲೇ ಇದೆ.
ನಿಮ್ಮ ಗಮನಕ್ಕೆ: ಮೇಲಿನ ಬೆಲೆಗಳು ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ ಮತ್ತು ಬೆಳ್ಳಿ ದರಗಳು ದಿನಕ್ಕೆ ಹಲವಾರು ಬಾರಿ ಬದಲಾವಣೆಗೊಳ್ಳುತ್ತಿರುತ್ತವೆ. ನಿಖರವಾದ ಬೆಲೆಗಳನ್ನು ತಿಳಿಯಲು ಆಗಾಗ್ಗೆ ಗೋಲ್ಡ್ ರೇಟ್ ತಿಳಿಸುವ ಅಧಿಕೃತ ಜಾಲ ಅಥವಾ ನಿಮ್ಮ ಹತ್ತಿರದ ಚಿನ್ನದ ವ್ಯಾಪಾರಿಯನ್ನು ಸಂಪರ್ಕಿಸಿ,(ಏಜೆನ್ಸೀಸ್).