

ಪಿರಿಯಾಪಟ್ಟಣ: ತಾಲೂಕಿನ ಚಿಟ್ಟೆನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು 2023-24 ನೇ ಸಾಲಿನಲ್ಲಿ 23.79 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಟಿ.ಸತೀಶ್ ತಿಳಿಸಿದರು.
ತಾಲೂಕಿನ ಚಿಟ್ಟೆನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆವರಣದಲ್ಲಿ ಬುಧವಾರ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದಲ್ಲಿ ಸಾಲ ಪಡೆದಿರುವ ಷೇರುದಾರರು ಸಕಾಲಕ್ಕೆ ಸಾಲ ಮರುಪಾವತಿಸಿ ಸಂಘದ ಆರ್ಥಿಕ ಸದೃಢತೆಗೆ ಸಹಕರಿಸಬೇಕು ಎಂದರು.
ಸಂಘವು ರೈತರ ಮತ್ತು ಸಹಕಾರಿಗಳ ಏಳಿಗೆಯನ್ನು ಬಯಸುತ್ತದೆ. ಸಂಘದ ಮೂಲಕ ಷೇರುದಾರರಿಗೆ ಸಹಕಾರಿಯಾಗುವ ಅನೇಕ ಯೋಜನೆಗಳನ್ನು ನೀಡಲಾಗಿದೆ. ಸಹಕಾರಿಗಳಿಗೆ ಆರ್ಥಿಕ ಸಾಲ, ವ್ಯವಸಾಯಕ್ಕೆ ಪೂರಕವಾದ ಪರಿಕರಗಳನ್ನು ನೀಡಿ ಸಹಕರಿಸುತ್ತಿದೆ ಎಂದು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಅಭಿಷೇಕ್ ಮಾತನಾಡಿ, 2023-24 ನೇ ಸಾಲಿನಲ್ಲಿ ಸಂಘ ನಡೆಸಿರುವ ವಹಿವಾಟಿನ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಾಮಚಂದ್ರಯ್ಯ, ನಿರ್ದೇಶಕ ಸಿ.ಎನ್.ರವಿ, ಬಿ.ಎಸ್.ರಾಮಚಂದ್ರ, ಬಿ.ಎಂ.ನಾಗರಾಜ್, ರತ್ನಮ್ಮ, ಡಿ.ಸೋಮಶೇಖರ್ ಜಾನಕಮ್ಮ, ಮಂಜುನಾಥ್, ಮಲ್ಲಿಕಾರ್ಜುನ, ಸಚ್ಚಿದಾನಂದ, ವೀರಭದ್ರ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಮಹದೇವಯ್ಯ ಇತರರು ಹಾಜರಿದ್ದರು.