22ರಿಂದ ಸ್ವದೇಶಿ ಮೇಳ

Exbihition (3)web
Published on

ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ವತಿಯಿಂದ ಜ.22 ರಿಂದ 26 ರವರೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸ್ವದೇಶಿ ಮೇಳ ಆಯೋಜಿಸಲಾಗಿದೆ ಎಂದು ಕ್ಷೇತ್ರೀಯ ಸಮನ್ವಯ ಪ್ರಮುಖ ಎನ್.ಆರ್.ಮಂಜುನಾಥ್ ತಿಳಿಸಿದರು.

ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿ 9.30ರವರೆಗೆ ಮೇಳಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಇಲ್ಲಿ ನಿತ್ಯ ಬಳಕೆ ವಸ್ತುಗಳು, ಗೋ ಆಧಾರಿತ ಉತ್ಪನ್ನ, ನೈಸರ್ಗಿಕ ಸೌಂದರ್ಯ ವರ್ಧಕ, ಆಯುರ್ವೇದ ಔಷಧ, ಸಾವಯವ ವಸ್ತುಗಳು, ಸಿರಿಧಾನ್ಯ, ಖಾದಿ ಉತ್ಪನ್ನ, ದೇಶಿ ಆಹಾರಗಳು, ಸ್ವದೇಶಿ ನಿರ್ಮಿತ ಕಾರು ಹಾಗೂ ಸ್ಕೂಟರ್ ಪ್ರದರ್ಶನ ಮತ್ತು ಮಾರಾಟ ಇರಲಿವೆ. ಸುಮಾರು 300 ಮಳಿಗೆಗಳು ಇರಲಿದ್ದು, ಉತ್ಪಾದಕರಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ತಯಾರಾದ ವಸ್ತುಗಳಿಗೆ ಪ್ರಾಮುಖ್ಯ ಇರಲಿವೆ. ಜ.22ರಂದು ಸಂಜೆ 5 ಗಂಟೆಗೆ ಉದ್ಘಾಟನೆ ನಡೆಯಲಿದೆ. ದೇಶೀಯ ಆಹಾರಗಳ್ನು ಸವಿಯಬಹುದಾಗಿದೆ. ಅಲ್ಲದೆ, ಮೈಸೂರು ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಮಾಹಿತಿ ನೀಡಿದರು.

ಆಯೋಜಕರಾದ ಸಿದ್ದರಾಜು, ಶ್ರೀವತ್ಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net