

ಮೈಸೂರು ಕರಾಟೆ ಸಂಸ್ಥೆ ವತಿಯಿಂದ ಜೂನ್ 22ರಂದು ಬೆಳಗ್ಗೆ 8ಕ್ಕೆ ಮಹಾರಾಜ ಕಾಲೇಜು ಹಾಕಿ ಮೈದಾನದಲ್ಲಿ ಸ್ವಯಂ ರಕ್ಷಣೆಗಾಗಿ ಕರಾಟೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ಸುಮಾರು 1500 ಮಂದಿ ಕರಾಟೆ ಪಟುಗಳು ಪಾಲ್ಗೊಂಡು ಪ್ರಾತ್ಯಕ್ಷಿಕೆ ನೀಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಸುನಿಲ್‌ಕುಮಾರ್ ತಿಳಿಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು. ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಉಪ ಪೊಲೀಸ್ ಆಯುಕ್ತ ಸಿ.ಮಲ್ಲಿಕ್, ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವ ಕರಾಟೆ ದಿನದ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ಕರಾಟೆ ಪಟುಗಳಾಗಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಿ, ಕರಾಟೆ ಪ್ರದರ್ಶನ ನಡೆಸಲಾಗುವುದು ಎಂದರು. ಪದಾಧಿಕಾರಿಗಳಾದ ಸೋಸಲೆ ಸಿದ್ದರಾಜು, ಶಿವದಾಸ್, ಭಾರತಿ ಆನಂದ್, ಶಂಕರ್ ಇದ್ದರು.