22ರಂದು ಮೂಲಸ್ಥಾನೇಶ್ವರಸ್ವಾಮಿ ರಥೋತ್ಸವ

madesh
ತಿ.ನರಸೀಪುರದ ಅನಾದಿ ಶ್ರೀ ಮೂಲಸ್ಥಾನೇಶ್ವರ ಹಾಗೂ ಶ್ರೀ ಶಿವಕಾಮ ಸುಂದರಮ್ಮ ದೇವಿ ಉತ್ಸವಮೂರ್ತಿ.
Published on

ತಿ.ನರಸೀಪುರ: ಪಟ್ಟಣದ ಹಳೇ ಸಂತೆಮಾಳದ ಶ್ರೀ ಶಿವಕಾಮ ಸುಂದರಮ್ಮ ಸಮೇತ ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಮಾ.22ರಂದು ಜರುಗಲಿದೆ.


ರಥೋತ್ಸವದ ಪ್ರಯುಕ್ತ ಮಾ.18ರಂದು ಮಧ್ಯಾಹ್ನ 4 ಗಂಟೆಗೆ ದೇವಾಲಯದಲ್ಲಿ ಶ್ರೀ ಗಣಪತಿ ಪೂಜೆ, ನವಗ್ರಹ ಪೂಜೆ, ವಾಸ್ತು ಪೂಜೆ, ಪ್ರಾಯಶ್ಚಿತ ಹೋಮ, 19ರ ಸಂಜೆ 6ಗಂಟೆಗೆ ಗಿರಿಜಾ ಕಲ್ಯಾಣ ಜರುಗಲಿದೆ.


ಮಾ.22ರಂದು ಬೆಳಗ್ಗೆ 9ಗಂಟೆಗೆ ದಳವಾಯಿ ಅಗ್ರಹಾರದ ಶ್ರೀ ರಾಮಮಂದಿರದಲ್ಲಿ ಶ್ರೀ ಶಿವಕಾಮ ಸುಂದರಮ್ಮ ಸಮೇತ ಶ್ರೀ ಅನಾದಿ ಮೂಲಸ್ಥಾನೇಶ್ವರಸ್ವಾಮಿ ಮಂಟಪೋತ್ಸವ ಆರಂಭವಾಗಲಿದೆ. ರಥ ಬೀದಿಯಲ್ಲಿ ಮಂಟಪೋತ್ಸವ ಸಾಗಲಿದೆ. ಬೆಳಗ್ಗೆ 11 ಗಂಟೆಗೆ ದಳವಾಯಿ ಅಗ್ರಹಾರದ ಅಡುಗೆ ಕಂಟ್ರಾೃಕ್ಟರ್ ಮಣಿ ಅವರ ಮನೆ ಮುಂದೆ ಬ್ರಹ್ಮ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ.


ರಾತ್ರಿ 7ಗಂಟೆಗೆ ದೇವಾಲಯದಲ್ಲಿ ಶಯನೋತ್ಸವ ನೆರವೇರಲಿದೆ. ಮಾ.23ರಂದು ಸಂಜೆ 6ಗಂಟೆಗೆ ದೇವಸ್ಥಾನ ಮುಂಭಾಗ ಕೆ.ಪಿ.ರೇವತಿ ತಂಡದ ಸದಸ್ಯರಿಂದ ದೇವರ ನಾಮ, ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಟಿ.ಎಸ್.ರಾಘವೇಂದ್ರ ಸಾಕಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net