ಮೂರು ಬಾರಿ ನಿಶ್ಚಿತಾರ್ಥ ರದ್ದು: ಕುಳ್ಳಗಿದ್ದೇನೆಂದು ಮನನೊಂದು ಯುವತಿ ಆತ್ಮಹತ್ಯೆ

ranchi woman end her life
Published on

ರಾಂಚಿ: ಕುಳ್ಳಗಿದ್ದೇನೆಂದು ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಝಾರ್ಖಂಡ್​ನ ರಾಜಧಾನಿ ರಾಂಚಿಯಲ್ಲಿ ನಡೆದಿದೆ.

ಶ್ವೇತಾ(22) ಮೃತ ಯುವತಿಯಾಗಿದ್ದು, ಶ್ವೇತಾ ತನ್ನ ಅಕ್ಕ ಶಿಲ್ಪಾ ಜತೆ ರಾಂಚಿಯ ಫ್ಲಾಟ್​​ವೊಂದರಲ್ಲಿ ವಾಸಿಸುತ್ತಿದ್ದರು. ಶ್ವೇತಾಳ ತಂದೆ ತಾಯಿ ಬಿಹಾರದ ಅರ್ವಾಲ್‌ನಲ್ಲಿ ವಾಸಿಸುತ್ತಿದ್ದರು. ಕಡಿಮೆ ಎತ್ತರದ ಬಗ್ಗೆ ತುಂಬಾ ಚಿಂತಿತಳಾಗಿದ್ದಳು. ಕುಳ್ಳಗಿನ ಕಾರಣಕ್ಕೆ ಜಾಸ್ತಿ ತಲೆಕೆಡಿಸಿಕೊಂಡಿದ್ದ ಯುವತಿಯು ಖಿನ್ನತೆಗೆ ಒಳಗಾಗಿದ್ದು, ಈ ಕುರಿತು ಮನೆಯವರು ಆಕೆಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡ ಎಂದು ಹಲವು ಬಾರಿ ಹೇಳಿದ್ದರು.

ಬಂದ ವರಗಳು ಆಕೆಯನ್ನು ತಿರಸ್ಕರಿಸಿದ್ದರಿಂದ, ಆಕೆ ಕಡಿಮೆ ಎತ್ತರದ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದ್ದಳು ಎಂದು ಆಕೆಯ ಅಕ್ಕ ಶಿಲ್ಪಾ ಪೊಲೀಸರ ಮುಂದೆ ಹೇಳಿದ್ದಾಳೆ. ಅಲ್ಲದೇ. ಮೂರು ಕಡೆ ಮದುವೆ ನಿಶ್ಚಯವಾದ ಮೇಲೂ ಕ್ಯಾನ್ಸಲ್ ಆಗಿದ್ದು, ಇದು ಆಕೆಯ ಮನಸ್ಸಿನ ಮೇಲೆ ತೀವ್ರ ಪರಿಣಾಮವನ್ನು ಬೀರಿತ್ತು.

ಕೊನೆಗೆ, ಶಿಲ್ಪಾ ಗುರುವಾರ ರಾತ್ರಿ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ತಡರಾತ್ರಿ ಮನೆಗೆ ಬಂದಾಗ ಶ್ವೇತಾ ತಮ್ಮ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ ಬಳಿಕ ಅಕ್ಕಪಕ್ಕದವರಿಗೆ ಮಾಹಿತಿ ನೀಡಿದ್ದಾಳೆ.  ಕೂಡಲೇ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net