21ರಂದು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ

Student writing essay computation
Published on

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ದತ್ತಿ ಕಾರ್ಯಕ್ರಮದ ಅಂಗವಾಗಿ ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಫೆ.21 ಮಧ್ಯಾಹ್ನ 2 ಗಂಟೆಗೆ ‘ವಚನ ಸಾಹಿತ್ಯದಲ್ಲಿ ಆರ್ಥಿಕ ಚಿಂತನೆಗಳು’ ವಿಷಯ ಕುರಿತು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.

ಪ್ರಬಂಧ ಸ್ಪರ್ಧೆಯ ಬಳಿಕ ಅಂದು ಮಧ್ಯಾಹ್ನ 3 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಗುವುದು. ಜಿಲ್ಲಾ ವ್ಯಾಪ್ತಿಯ ಪದವಿ ಕಾಲೇಜಿನ ಆಸಕ್ತ ಪದವಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಒಂದು ಕಾಲೇಜಿನಿಂದ ಗರಿಷ್ಠ 4 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಸ್ಪರ್ಧಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಪ್ರಥಮ ಬಹುಮಾನ 1,500 ರೂ., ದ್ವಿತೀಯ ಬಹುಮಾನ 1,250 ರೂ., ತೃತೀಯ ಬಹುಮಾನ 1000 ರೂ. ಹಾಗೂ ಸಮಾಧಾನಕರ ಬಹುಮಾನಗಳು ಇಬ್ಬರಿಗೆ ತಲಾ 500 ರೂ. ನೀಡಲಾಗುತ್ತದೆ.

ಸ್ಪರ್ಧಿಗಳು ಮೊಬೈಲ್/ ಇ-ಮೇಲ್ ಮೂಲಕ ನೋಂದಾಯಿಸಿಕೊಳ್ಳಬಹುದು. ಸ್ಪರ್ಧೆಯ ದಿನದಂದು ಸ್ಥಳದಲ್ಲಿಯೇ ನೋಂದಣಿ ಮಾಡಿಸಿಕೊಂಡು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡಾ. ಬಿ.ಎಸ್.ಸುದೀಪ್ ಮೊ: 9242829947, ಡಾ.ಬಿ.ಪ್ರಭುಸ್ವಾಮಿ ಮೊ: 8861654566 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇ-ಮೇಲ್ ಠ್ಠಛಿಛಿಚಿಛಿಚ್ಝಃಜಞಜ್ಝಿ.್ಚಟಞ -್ಝಠಿ;ಞಜ್ಝಿಠಿಟ:ಠ್ಠಛಿಛಿಚಿಛಿಚ್ಝಃಜಞಜ್ಝಿ.್ಚಟಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net