

ಪ್ರಮುಖ ಮುಖ್ಯಾಂಶಗಳು
ಕಳಪೆ ಬೀಜಗಳನ್ನು ನೀಡಿದ ಕಂಪನಿಯ ಲೈಸೆನ್ಸ್ ರದ್ದುಪಡಿಸುವಂತೆ ತೋಟಗಾರಿಕಾ ಇಲಾಖೆಗೆ ಹಿಂದೊಮ್ಮೆ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಗಣಿಸಿಲ್ಲ. ಈ ಆದೇಶ ಪ್ರತಿಯೊಂದಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲಾಗುವುದು. ಇಂತಹ ಕಂಪನಿಗಳ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕಳಪೆ ಬೀಜಗಳಿಂದ ಸಮಸ್ಯೆಯಾಗಿದ್ದರೆ ಗ್ರಾಹಕರ ಆಯೋಗದಲ್ಲಿ ವಕೀಲರ ಸಹಾಯವಿಲ್ಲದೆ ಪ್ರಕರಣ ನಡೆಸಬಹುದು. ಈ ಬಗ್ಗೆ ರೈತರು ತಿಳಿದಿದ್ದರೆ ಉತ್ತಮ.