

ರಾಣೆಬೆನ್ನೂರ: ನಗರದ 220ಕೆವಿ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ. 20ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ತಾಲೂಕಿನ ಹಲಗೇರಿ, ಬಿಲ್ಲಹಳ್ಳಿ, ದಂಡಗಿಹಳ್ಳಿ, ಹಾರೋಗೊಪ್ಪ, ಆಲದಕಟ್ಟಿ, ಮಣಕೂರು, ಲಿಂಗದಹಳ್ಳಿ, ಅಂತರವಳ್ಳಿ, ನಂದಿಹಳ್ಳಿ, ಯಲಬಡಗಿ, ಗೋಡಿಹಾಳ, ನಿಟ್ಟೂರು, ಕೋಣನತಲೆ, ಗುಡ್ಡದ ಬೇವಿನಹಳ್ಳಿ, ಗುಡ್ಡದ ಹೊಸಳ್ಳಿ, ಹೆಡಿಯಾಲ, ಜೋಯಿಸರಹರಳಹಳ್ಳಿ, ಬೆನಕನಕೊಂಡ, ಉಕ್ಕುಂದ, ಸುಣಕಲ್ಲಬಿದರಿ, ತಿರುಮಲದೇವರಕೊಪ್ಪ, ಕುಸಗೂರು, ಸರವಂದ, ಮುದೇನೂರು, ನಾಗೇನಹಳ್ಳಿ, ಹೊಳೆಆನ್ವೇರಿ, ಮಲಕನಹಳ್ಳಿ, ಮುದೇನೂರು, ಹನುಮನಹಳ್ಳಿ, ತೆರೆದಹಳ್ಳಿ, ಕೃಷ್ಣಾಪುರ, ಮುಷ್ಟೂರು, ಇಟಗಿ, ಕಮದೋಡ, ಹುಣಸಿಕಟ್ಟೆ ಗ್ರಾಮಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.