

ಚಿತ್ರದುರ್ಗ: ದಲಿತ ಮುಖಂಡ,ಹೋರಾಟಗಾರ ಎಂ.ಜಯಣ್ಣರ ರಾಜ್ಯಮಟ್ಟದ ಶ್ರದ್ಧಾಂಜಲಿ ಸಭೆ ಕ್ಯಾದಿಗೆರೆ ಬಳಿಯ ಅವರ ಸಮಾಧಿ ಸ್ಥಳದಲ್ಲಿ ಡಿ.20ರಂದು ನಡೆಯಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ನಗರದ ಆಸ್ಕರ್ ಫರ್ನಾಂಡಿಸ್ ಶಾಲೆಯಲ್ಲಿ ಮಂ ಗಳವಾರ ಕರೆದಿದ್ದ ಕಾರ‌್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ಅಂದು ಬೆಳಗ್ಗೆ 11ಗಂಟೆಗೆ ಡಿಸಿಎಂ ಗೋವಿಂದ ಕಾರಜೋಳ ಸಭೆ ಉದ್ಘಾಟಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು,ಸಂಸದ ಎ.ನಾರಾಯಣ ಸ್ವಾಮಿ,ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಶಾ ಸಕರಾದ ಟಿ.ರಘುಮೂರ್ತಿ, ಜಿ.ಎಚ್. ತಿಪ್ಪಾರೆಡ್ಡಿ, ಪ್ರೊ.ಲಿಂಗಣ್ಣ,ಕವಿ ಡಾ.ಸಿದ್ದಲಿಂಗಯ್ಯ ಹಾಗೂ ರಾಜ್ಯದೆಲ್ಲೆಡೆಯಿಂದ ದಲಿತ ಹಾಗೂ ವಿವಿಧ ಸಂಘಟನೆಗಳ ಮುಖಂಡರು,ಜಯಣ್ಣರ ಅಭಿಮಾನಿಗಳು ಭಾಗವಹಿಸಲಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಿಂದ 10-15 ಜನರು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ರಚಿಸಿರುವ ಎಂ.ಜಯಣ್ಣ ಮೆ ಮೋರಿಯಲ್ ಚಾರಿಟಬಲ್ ಟ್ರಸ್ಟ್ ಕಾರ‌್ಯದರ್ಶಿಯನ್ನಾಗಿ ಅವರ ಪುತ್ರ ಜೆ.ಪ್ರಸನ್ನಕುಮಾರ್‌ರನ್ನು ನೇಮಿಸಲಾಗಿದೆ. ಇನ್ನು ಅನೇಕರನ್ನು ಟ್ರ ಸ್ಟಿಗೆ ನೇಮಿಸಲಾಗುವುದು. ಟ್ರಸ್ಟಿನ ಉದ್ದೇಶಿತ ಜನಪರ ಕಾರ‌್ಯಕ್ರಮಗಳನ್ನು ಅಂದು ಪ್ರಕಟಿಸಲಾಗುವುದು ಎಂದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜ,ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ,ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ದಲಿತ ಮುಖಂಡ ದುರ್ಗೆಶ್ ಮತ್ತಿತರರು ಇದ್ದರು.