2036ರ ಒಲಂಪಿಕ್​​ ಕ್ರೀಡಾಕೂಟ ಬಿಡ್​: ಅತಿಥ್ಯಕ್ಕೆ ಅಹಮದಾಬಾದ್ ನಗರ ಫೈನಲ್​ | Olympic

dk - 2025-07-02T130835.766
Published on

Olympic: ಕೇಂದ್ರ ಕ್ರೀಡಾ ಸಚಿವಾಲಯ, ಗುಜರಾತ್​ ಸರ್ಕಾರ ಹಾಗೂ ಭಾರತೀಯ ಒಲಂಪಿಕ್ ಅಸೋಸಿಯೇಷನ್​ ಅಧ್ಯಕ್ಷೆ ಪಿ.ಟಿ.ಉಷಾ ಅವರ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗವು ಮಂಗಳವಾರ ಲೌಸನ್ನೆಯಲ್ಲಿ ಅಂತರಾಷ್ಟ್ರೀಯ ಒಲಪಿಂಕ್​ ಸಮಿತಿ(ಐಒಸಿ) ಅಧಿಕಾರಿಗಳನ್ನು ಭೇಟಿ ಮಾಡಿ, ಭವಿಷ್ಯದ ಒಲಂಪಿಕ್​ (2036) ಕ್ರೀಡಾಕೂಟವನ್ನು ಆಯೋಜಿಸಲು ಗುಜರಾತ್​ನ ಅಹಮದಾಬಾದ್​ ನಗರವನ್ನು ಆಯ್ಕೆ ಮಾಡಿದೆ.

2036ರ ಒಲಂಪಿಕ್ ಅತಿಥ್ಯವಹಿಸಲು ​ ಐಒಸಿ ಅಧಿಕಾರಿಗಳ ಮುಂದೆ ಅಹಮದಾಬಾದ್​ ನಗರ ಬಿಡ್​ ಮಾಡಿದೆ. 2032ರ ಒಲಂಪಿಕ್ ಬ್ರಿಸ್ಬೇನ್​ನಲ್ಲಿ ನಡೆಯುತ್ತಿರುವುದರಿಂದ 2036ರ ಒಲಂಪಿಕ್​ ಬೇಸಿಗೆ ಕ್ರೀಡಾ ಕೂಟದ ಮೇಲೆ ಭಾರತ ತನ್ನ ದೃಷ್ಠಿಯನ್ನು ನೆಟ್ಟಿದೆ.

''ಭವಿಷ್ಯದ ಒಲಿಂಪಿಕ್ ಕ್ರೀಡಾಕೂಟವನ್ನು ಅಹಮದಾಬಾದ್ನಲ್ಲಿ ಆಯೋಜಿಸುವ ಬಗ್ಗೆ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಲು ಭಾರತೀಯ ನಿಯೋಗಕ್ಕೆ ಚರ್ಚೆಗಳು ಒಂದು ಪ್ರಮುಖ ವೇದಿಕೆಯನ್ನು ಒದಗಿಸಿದವು. ಅದೇ ಸಮಯದಲ್ಲಿ, ಅವರು ಒಲಿಂಪಿಕ್ ಕ್ರೀಡಾಕೂಟದ ಅವಶ್ಯಕತೆಗಳು ಮತ್ತು ಒಲಿಂಪಿಕ್ ಚಳವಳಿಯ ಭವಿಷ್ಯದ ಮಹತ್ವಾಕಾಂಕ್ಷೆಗಳ ಬಗ್ಗೆ ಐಒಸಿಯಿಂದ ಅಮೂಲ್ಯವಾದ ಒಳನೋಟಗಳನ್ನು ಪಡೆದರು" ಎಂದು ವರದಿಯಾಗಿದೆ.

2036ರ ಬೇಸಿಗೆ ಒಲಂಪಿಕ್​ಗೆ ಭಾರತ ಮಾತ್ರವಲ್ಲ, ಸೌದಿ, ಚಿಲಿ, ಇಂಡೋನೇಷಿಯಾ ಹಾಗೂ ಟರ್ಕಿ ಸೇರಿದಂತೆ ಇತರ ರಾಷ್ಟ್ರಗಳ ಪೈಪೋಟಿ ನಡೆಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net