2025ರ ಯೋಗ ದಸರಾ ಕಾರ್ಯಕ್ರಮಗಳ ಪ್ರಾಣಾಯಾಮ ಶಿಬಿರಗಳ ಮಾಹಿತಿ

mysore
Published on

ಮೈಸೂರು ದಸರಾ ಮಹೋತ್ಸವ ಮತ್ತು ಯೋಗ ದಸರಾ ಉಪಸಮಿತಿ-2025ರ ವತಿಯಿಂದ ಸಾರ್ವಜನಿಕರಿಗೆ ಯೋಗ- ಪ್ರಾಣಾಯಾಮವು ಅತೀ ಹೆಚ್ಚಿನ ಜನರಿಗೆ ತಲುಪಿಸುವ ಹಿತದೃಷ್ಟಿಯಿಂದ ಯೋಗ ದಸರಾ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಸೆಪ್ಟೆಂಬರ್ 18 ರಿಂದ ಸೆಪ್ಟೆಂಬರ್ 20 ರವರೆಗೆ 3 ದಿನಗಳ ಕಾಲ ಮೈಸೂರಿನ ವಿವಿಧಡೆ ವೈಜ್ಞಾನಿಕ ಪ್ರಾಣಾಯಾಮ ಶಿಬಿರವನ್ನು ಆಯೋಜಿಸಿದೆ.

 ಯೋಗ ದಸರಾ ಉಪಸಮಿತಿ- 2025ರ ವತಿಯಿಂದ ಯೋಗ ದಸರಾ ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಆಯೋಜಿಸಿರುವ ವೈಜ್ಞಾನಿಕ ಪ್ರಾಣಾಯಾಮ ಶಿಬಿರಗಳ ವಿವರ: ಪೂರ್ವಭಾವಿಯಾಗಿ ವೈಜ್ಞಾನಿಕ ಪ್ರಾಣಾಯಾಮ ಕಾರ್ಯಾಗಾರವನ್ನು ಈ ಕೆಳಗಿನ 12 ಸ್ಥಳಗಳಾದ ನಾದ ಬ್ರಹ್ಮಸಭಾ ಮಾನಂದವಾಡಿ ರಸ್ತೆ, ಮೈಸೂರು ಶ್ರೀಚಾಮುಂಡೇಶ್ವರಿ ದೇವಸ್ಥಾನ, ನಾಯ್ಡು ಸರ್ಕಲ್, ಶ್ರೀರಾಂಪುರ 2ನೇ ಹಂತ, ಮೈಸೂರು ಶ್ರೀ ಗಾಯತ್ರಿ ರಾಮಮಂದಿರ, 10ನೇ ಕ್ರಾಸ್, ಕೆಸರೆ, ರಾಜೇಂದ್ರಾ ನಗರ ಮೈಸೂರು ಶ್ರೀ ರಾಮಮಂದಿರ ಬಲ್ಲಾಳ್ ವೃತ್ತ, ಮೈಸೂರು ಶ್ರೀ ಗಣಪತಿ ದೇವಸ್ಥಾನ, ಸಿದ್ಧಾರ್ಥ ನಗರ, ಮೈಸೂರು ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಮಾತೃಮಂಡಳಿ ವೃತ್ರ ಮೈಸೂರು ಎಸ್ ಆರ್.ಎಸ್ ಮರ, ಕುವೆಂಪು ನಗರ, ಮೈಸೂರು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಶ್ರೀರಾಂಪುರ, ಮೈಸೂರು ತಾಲ್ಲೂಕು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಹಿನಕಲ್, ಮೈಸೂರು ತಾಲ್ಲೂಕು ಸರ್ಕಾರಿ ಪ್ರಕೃತಿ ಚಿಕಿತ್ಸಾ, ಅಸ್ಪತ್ರೆ ಕೆ.ಜಿ.ಕೊಪ್ಪಲು, ಮೈಸೂರು ತಾಲ್ಲೂಕು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಎಸ್ ಉತ್ತನಹಳ್ಳಿ, ಮೈಸೂರು ತಾಲ್ಲೂಕು ಮಾವುತ ಶಿಬಿರ, ಅರಮನೆ ಆವರಣ, ಮೈಸೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆಯುಷ್ ಕಛೇರಿಯ ಜಿಲ್ಲಾ ಆಯುಷ್ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net