2025 ನೇ ಶೈಕ್ಷಣಿಕ ಸಾಲಿನ ಐ.ಟಿ ಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

application
Published on

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನಂಜನಗೂಡು ಇಲ್ಲಿ 2025 ನೇ ಸಾಲಿನ ಪ್ರವೇಶತಿಗಾಗಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಅಥವಾ ಖುದ್ದಾಗಿ ಕಚೇರಿಗೆ ಬಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೂ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಮತ್ತು ಮೊದಲ ಸುತ್ತಿನ ಪ್ರವೇಶ ವಂಚಿತ ಅಭ್ಯರ್ಥಿಗಳಿಗೆ ಭರ್ತಿಯಾದೆ ಉಳಿದ ಸ್ಥಾನಗಳಿಗೆ ನೇರ ದಾಖಲೆಗೆ ಅವಕಾಶವಿರುತ್ತದೆ. ವೆಬ್ ಸೈಟ್ ವಿಳಾಸ http://cite.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರವೇಶಕ್ಕಾಗಿ ಲಭ್ಯವಿರುವ ವೃತ್ತಿಗಳು: ELECTRONIC MECHANIC ವೃತ್ತಿ 2 ವರ್ಷ ಅವಧಿ 24 ಸೀಟು ಲಭ್ಯವಿದೆ, FITTER ವೃತ್ತಿ 2 ವರ್ಷ ಅವಧಿ 40 ಸೀಟು ಲಭ್ಯವಿದೆ, MACHINIST ವೃತ್ತಿ 2 ವರ್ಷ ಅವಧಿ 20 ಸೀಟು ಲಭ್ಯವಿದೆ, WELDER ವೃತ್ತಿ 1 ವರ್ಷ ಅವಧಿ 20 ಸೀಟು ಲಭ್ಯವಿದೆ.

TATA UDHYOG TRADES: C.N.C MACHINING TECHNICIAN ವೃತ್ತಿ 2 ವರ್ಷ ಅವಧಿ 24 ಸೀಟು ಲಭ್ಯವಿದೆ, MACHANIC ELECTRIC VEHICLE ವೃತ್ತಿ 2 ವರ್ಷ ಅವಧಿ 24 ಸೀಟು ಲಭ್ಯವಿದೆ, INDUSTRIAL ROBOTICS AND DIGITAL MANUFACTURING ವೃತ್ತಿ 1 ವರ್ಷ ಅವಧಿ 20 ಸೀಟು ಲಭ್ಯವಿದೆ, VIRTUAL ANALYSIS AND DISIGNER ವೃತ್ತಿ 2 ವರ್ಷ ಅವಧಿ 24 ಸೀಟು ಲಭ್ಯವಿದೆ, MANUFACTURING PROCESS CONTROL AND AUTOMATION ವೃತ್ತಿ 1 ವರ್ಷ ಅವಧಿ 20 ಸೀಟು ಲಭ್ಯವಿದೆ, ENGENEERING DESIGN TECHNICIAN ವೃತ್ತಿ 1 ವರ್ಷ ಅವಧಿ 10 ಸೀಟು ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, #16 A, ಕೆ.ಐ.ಎ.ಸಿ.ಬಿ. ಕೈಗಾರಿಕಾ ಪ್ರದೇಶ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ನಂಜನಗೂಡು-571302 ದೂ.ಸಂ 7090056455, 9972966843, 8123651975, 9686807387, 8123651975, 9902649326, 8431750755 ಅನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net