

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಎನ್ ಆರ್ ಮೊಹಲ್ಲಾ, ಮೈಸೂರು -07 ಇಲ್ಲಿನ 2025-26ನೇ ಸಾಲಿನ ವಿವಿಧ ವೃತ್ತಿಗಳ ಖಾಲಿ ಸ್ಥಾನಗಳಿಗೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಹಾಗೂ 8ನೇ ತರಗತಿ ಪಾಸಾದ (10 ನೇ ತರಗತಿ ಫೇಲ್ ಆದ ಅಭ್ಯರ್ಥಿಗಳು) ವೆಲ್ಡರ್ ವೃತ್ತಿಗೆ ಅವಕಾಶವಿರುತ್ತದೆ. ಮೆರಿಟ್ ಆಧಾರದಲ್ಲಿ ಪ್ರಾಚಾರ್ಯರ ಹಂತದಲ್ಲಿಯೇ ಆಫ್ ಲೈನ್ (ನೇರ ಪ್ರವೇಶ) ಪ್ರವೇಶ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳಿಗೆ ಐಟಿಐ ಗೆ ನೇರವಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, (ಐಬಿಐ) ಎನ್ ಆರ್ ಮೊಹಲ್ಲಾ, ಮೈಸೂರು -07 ನ್ನು ನೇರವಾಗಿ ಅಥವಾ ದೂರವಾಣಿ ಸಂ: 0821-2498456 / 9945616088 ನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ದರ್ಜೆ -1 ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.