ಕರೊನಾ ವೈರಸ್​ ಸೋಂಕು ವಿರುದ್ಧ ಹೋರಾಡಿದ ವೈದ್ಯರು ಹಾಗೂ ನರ್ಸ್​ಗಳಿಗೆ 2020ನೇ ವರ್ಷ ಮೀಸಲು

Narendra Modi 7 March 20
Published on

ನವದೆಹಲಿ: ಮಾರಕ ಕರೊನಾ ವೈರಸ್​ ಸೋಂಕು ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರು ಹಾಗೂ ನರ್ಸ್​ಗಳ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮ,ರಿಸಿದರು.

ಕರೊನಾ ವೈರಸ್​ ಸೋಂಕು ವಿರುದ್ಧ ಹೋರಾಟ ಆರಂಭಿಸಿರುವ ಬೆಂಗಳೂರಿನ ವೈದ್ಯ ನಿರಂಜನ್​ ಸುಧಾಕರ್​ ಅವರ ಸೇವೆಯನ್ನು ಈ ವೇಳೆ ಪ್ರಧಾನಿ ಮೋದಿ ಅವರು ಶ್ಲಾಘಿಸಿದರು. 2020ನೇ ವರ್ಷವನ್ನು ವೈದ್ಯರು ಹಾಗೂ ನರ್ಸ್​ಗಳಿಗೆ ಮೀಸಲು ಇಡುವುದಾಗಿ ಅವರು ತಿಳಿಸಿದರು.

ಡೆಲವರಿ ಹುಡುಗರು ಹಾಗೂ ಬ್ಯಾಂಕ್​ ಸಿಬ್ಬಂದಿ ಸೇವೆ ಕೂಡ ಮರೆಯುವಂತಿಲ್ಲ. ಒಟ್ಟಾರೆ ಎಲ್ಲರೂ ಕರೊನಾ ವಿರುದ್ಧ ಸಮರಕ್ಕೆ ಮುಂದಾಗಿದ್ದೀರಿ. ಕರೊನಾ ವೈರಸ್​ ಸೋಂಕಿನ ಲಕ್ಷಣ ಗೋಚರಿಸುತ್ತಿದ್ದಂತೆ ಮನೆಗಳಲ್ಲಿ ಕ್ವಾರಂಟೈನ್​ ಆಗಿ. ಮಾಹಿತಿಯನ್ನು ಸಮೀಪದ ವೈದ್ಯರಿಗೆ ತಿಳಿಸಿದೆ ಎಂದು ಅವರು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net