

ನವದೆಹಲಿ: 2ಸಾವಿರ ರೂ.ನೋಟುಗಳನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ನೀಡಲಾಗಿದ್ದ ಗಡುವು ಶನಿವಾರಕ್ಕೆ ಮುಕ್ತಾಯವಾಗಿದ್ದು, ಮುಂದೇನು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿರಬಹುದು. ಆದರೆ ಆತಂಕಗೊಳ್ಳುವ ಅಗತ್ಯವಿಲ್ಲ, ಇನ್ನು ಮುಂದೆ ಬೆಂಗಳೂರು ಸೇರಿದಂತೆ ದೇಶದ 19 ಆರ್ಬಿಐ ವಿಭಾಗೀಯ ಕಾರ್ಯಾಲಯಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಇದಕ್ಕೆ ಆರ್ಬಿಐ ಅನುಮತಿಸಿದೆ.
ಆರ್ಬಿಐ ವಿಭಾಗೀಯ ಕಾರ್ಯಾಲಯಗಳಲ್ಲಿ ಪ್ರತಿ ವಹಿವಾಟಿಗೆ ಗರಿಷ್ಠ 20ಸಾವಿರ ರೂಗಳ ವಿನಿಮಯ ಮಿತಿ ಹೇರಲಾಗಿದೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ಪ್ರಸ್ತುತಪಡಿಸಿ 2ಸಾವಿರ ರೂ.ನೋಟುಗಳನ್ನು ಪ್ರಸ್ತುತಪಡಿಸಬಹುದು. ಈ ನೋಟುಗಳ ಮೌಲ್ಯಯುತವಾದರೂ ಇನ್ನು ಮುಂದೆ ಅವುಗಳನ್ನು ವಹಿವಾಟುಗಳಿಗೆ ಸ್ವೀಕರಿಸಲಾಗುವುದಿಲ್ಲ. ನೋಟುಗಳನ್ನು ಆರ್‌ಬಿಐನೊಂದಿಗೆ ಮಾತ್ರ ಬದಲಾಯಿಸಬಹುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆಗೆ ಮೊದಲು ಸೆ.30ರವರೆಗೆ ಆರ್ಬಿಐ ಗಡುವು ವಿಧಿಸಿದ್ದು, ಬಳಿಕ ಅ.7ರವರೆಗೆ ಕಾಲಾವಕಾಶ ನೀಡಿತ್ತು. ಮಾರುಕಟ್ಟೆಯಲ್ಲಿ ಇನ್ನೂ ಈ ನೋಟುಗಳು ಉಳಿದುಕೊಂಡಿರುವ ಕಾರಣ ಇನ್ನು ಮುಂದೆ ಆರ್ಬಿಐನ ಪ್ರಾದೇಶಿಕ ಕಾರ್ಯಾಲಯಗಳಲ್ಲಿ ಬದಲಿಸಿಕೊಳ್ಳಲು ಅನುಮತಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರನೆ ಅಧಿಕ ಮುಖಬೆಲೆಯ 1ಸಾವಿರ, 5ನೂರು ರೂ,ನ ನೋಟುಗಳನ್ನು ರದ್ದುಗೊಳಿಸಿದ ನಂತರ ನವೆಂಬರ್ 2016 ರಲ್ಲಿ ಆರ್ಬಿಐ 2ಸಾವಿರ ರೂ. ನೋಟು ಮುದ್ರಿಸಲು ಪ್ರಾರಂಭಿಸಿತು. ಆದರೆ ಮೇ ತಿಂಗಳಲ್ಲಿ ಹೆಚ್ಚಿನ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ ನಂತರ 2ಸಾವಿರ ಮುಖಬೆಲೆಯ ನೋಟುಗಳಲ್ಲಿ ಸುಮಾರು ಶೇ.96 ರಷ್ಟು ಆರ್ಬಿಐಗೆ ಮರಳಿವೆ. ಇನ್ನು ಸೆಪ್ಟೆಂಬರ್ 29ರವರೆಗೆ ಕೇವಲ 0.14 ಲಕ್ಷ ಕೋಟಿ ಮೌಲ್ಯದ 2ಸಾವಿರ ರೂ, ನೋಟುಗಳು ಚಲಾವಣೆಯಲ್ಲಿ ಉಳಿದಿವೆ.
ಇನ್ನು ದೇಶದಲ್ಲಿ 2ಸಾವಿರ ಮುಖಬೆಲೆಯ ಒಟ್ಟು 12ಸಾವಿರ ಕೋಟಿ ಮೊತ್ತದ ನೋಟುಗಳು ಚಲಾವಣೆಯಲ್ಲಿದ್ದವು ಎನ್ನಲಾಗುತ್ತಿದೆ.