ಅನ್ನಸಂತರ್ಪಣೆ ಮುಗಿಯುತ್ತಿದ್ದಂತೆ ಅಸ್ವಸ್ಥರಾದ ಮಂದಿ; 200ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

Annasantarpane 14 March 20
Published on

ಬಳ್ಳಾರಿ: ಫಕ್ಕಿರಸ್ವಾಮಿ ಉರುಸ್​ ನಿಮಿತ್ತ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ ಊಟ ಮಾಡಿದ 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆ ಸೇರುವಂತಾಗಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ಫಕ್ಕಿರಸ್ವಾಮಿ ಉರುಸ್ ನಿಮಿತ್ತ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಇದರಲ್ಲಿ ಸ್ಥಳೀಯರು ಸಾಮೂಹಿಕ ಭೋಜನ ಮಾಡಿದ್ದರು. ಊಟ ಮಾಡಿದವರಲ್ಲಿ 200ಕ್ಕೂ ಹೆಚ್ಚುಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಅವರನ್ನೆಲ್ಲ ಆಂಬುಲೆನ್ಸ್​ ಮತ್ತು ಸ್ಥಳೀಯ ವಾಹನಗಳ ಮೂಲಕ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳ ಆರೋಗ್ಯವೂ ಅಸ್ವಸ್ಥವಾಗಿದ್ದು ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net