ಗೌತಮ್ ಬುದ್ಧ ನಗರದಲ್ಲಿ ಪ್ರವಾಹದ ಮುನ್ಸೂಚನೆ!; ಐದು ಗ್ರಾಮಗಳಿಂದ ಸುಮಾರು 200 ಜನರ ಸ್ಥಳಾಂತರ

Untitled design - 2023-07-23T150813.361
Published on

ನೋಯ್ಡಾ: ಯಮುನಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾದ ಹಿನ್ನಲೆ ಪ್ರವಾಹ ಭೀತಿ ಎದುರಾಗಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಂಕಷ್ಟ ಪರಿಸ್ಥಿತಿ ಉಂಟಾಗಲಿದೆ ಎಂದು ಗೌತಮ್ ಬುದ್ಧ ನಗರ ಆಡಳಿತವು ಪ್ರವಾಹ ಎಚ್ಚರಿಕೆ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ  ಮುನ್ಸೂಚನೆ ನೀಡಿರುವ ಅಧಿಕಾರಿಗಳು, ಈಗಾಗಲೇ ಐದು ಗ್ರಾಮಗಳಿಂದ ಸುಮಾರು 200 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. "ಪಶ್ಚಿಮ ಉತ್ತರ ಪ್ರದೇಶದ ದೆಹಲಿಯ ಗಡಿ ಜಿಲ್ಲೆಯಲ್ಲಿರುವ ನದಿಯು 205 ಮೀಟರ್‌ಗಿಂತ ಕಡಿಮೆ ಅಪಾಯದ ಮಟ್ಟದಿಂದ ಹರಿಯುತ್ತಿದೆ. ಹಾಗಾಗಿ ಐದು ಗ್ರಾಮಗಳಿಂದ ಸುಮಾರು 200 ಜನರನ್ನು ಮುನ್ನೆಚ್ಚೆರಿಕೆ ವಹಿಸಿ ಶೀಘ್ರವೇ ಸ್ಥಳಾಂತರಿಸಲಾಗಿದೆ ಮತ್ತು ಅವರಿಗೆ ವಸತಿ, ಆಹಾರ ಮತ್ತು ಆರೋಗ್ಯ ರಕ್ಷಣೆಯನ್ನು ಒದಗಿಸಲು ಆಡಳಿತವು ಎಲ್ಲಾ ಕ್ರಮಗಳನ್ನು ಅನುಸರಿಸಿದೆ" ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅತುಲ್ ಕುಮಾರ್ ಮಾಹಿತಿ ನೀಡಿದ್ದಾರೆ.

"ಹಿಂಡನ್​ ನದಿಯು ಪ್ರಸ್ತುತ 200 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ, ಅಪಾಯದ ಮಟ್ಟ 205 ಮೀಟರ್‌ಗಿಂತ ಕೆಳಗಿದೆ" ಎಂದು ಗೌತಮ್ ಬುದ್ಧನಗರದ ಪ್ರವಾಹ ಪರಿಹಾರ ಕಾರ್ಯದ ನೋಡಲ್ ಅಧಿಕಾರಿ ಕುಮಾರ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net