

ಬ್ಯಾಂಕಾಕ್: ಥಾಯ್ಲೆಂಡ್‌ನ(Thailand) ಪ್ರಧಾನಿ ಪೇಟೊಂಗ್ಟಾರ್ನ್ ಶಿನಾವತ್ರಾ ಶುಕ್ರವಾರ(ಜನವರಿ 3) USD 400 ಮಿಲಿಯನ್‌ಗಿಂತಲೂ ಹೆಚ್ಚು ಆಸ್ತಿಯನ್ನು ಘೋಷಿಸಿದ್ದಾರೆ. ಸುಮಾರು 4 ಬಿಲಿಯನ್ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ. ಅದರಲ್ಲಿ 2 ಮಿಲಿಯನ್ ಡಾಲರ್ಗಿಂತಲೂ ಹೆಚ್ಚು ಮೌಲ್ಯದ 200ಕ್ಕೂ ಹೆಚ್ಚು ಡಿಸೈನರ್ ಬ್ಯಾಗ್ಗಳು ಮತ್ತು ಸುಮಾರು USD 5 ಮಿಲಿಯನ್ ಮೌಲ್ಯದ ಕನಿಷ್ಠ 75 ಐಷಾರಾಮಿ ಕೈಗಡಿಯಾರಗಳು ಸೇರಿವೆ ಎಂದು ಅವರ ಪಕ್ಷವು ಹೇಳಿದೆ.
ಟೆಲಿಕಾಂ ಬಿಲಿಯನೇರ್ ಮತ್ತು ಮಾಜಿ ಪ್ರಧಾನಿ ತಕ್ಸಿನ್ ಶಿನವತ್ರಾ ಅವರ ಕಿರಿಯ ಪುತ್ರಿ ಪಾಟೊಂಗ್ಟಾರ್ನ್ ಶಿನವತ್ರಾ ಅವರು 20 ವರ್ಷಗಳಲ್ಲಿ ಥೈಲ್ಯಾಂಡ್ ಸರ್ಕಾರವನ್ನು ಮುನ್ನಡೆಸುವ ಕುಟುಂಬದ ನಾಲ್ಕನೇ ಸದಸ್ಯರಾಗಿದ್ದಾರೆ. ನಿಯಮಗಳ ಪ್ರಕಾರ, ಅವರು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಆಯೋಗದ (NACC) ಮುಂದೆ ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳನ್ನು ಘೋಷಿಸಬೇಕಾಗಿತ್ತು. ಅವರು 13.8 ಬಿಲಿಯನ್ ಬಹ್ತ್ ($400 ಮಿಲಿಯನ್) ಆಸ್ತಿಯನ್ನು ಗುರುತಿಸಿದ್ದಾರೆ ಎಂದು ದಾಖಲೆಯನ್ನು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.
ಆಕೆಯ ಹೂಡಿಕೆಯು 11 ಶತಕೋಟಿ ಬಹ್ತ್ ಮೌಲ್ಯದ್ದಾಗಿದ್ದು ಮತ್ತು 1 ಶತಕೋಟಿ ಬಹ್ತ್ ಠೇವಣಿ ಮತ್ತು ನಗದು ಹೊಂದಿದ್ದಾರೆ ಎನ್ನಲಾಗಿದೆ. ಆಕೆಯ ಇತರ ಸ್ವತ್ತುಗಳಲ್ಲಿ 162 ಮಿಲಿಯನ್ ಬಹ್ಟ್ ಮೌಲ್ಯದ 75 ಕೈಗಡಿಯಾರಗಳು ಮತ್ತು 39 ಹೆಚ್ಚಿನ ಟೈಮ್‌ಪೀಸ್‌ಗಳು, ಜತೆಗೆ 76 ಮಿಲಿಯನ್ ಬಹ್ಟ್ ಮೌಲ್ಯದ 217 ಡಿಸೈನರ್ ಬ್ಯಾಗ್ಗಳು, ಲಂಡನ್ ಮತ್ತು ಜಪಾನ್‌ನಲ್ಲಿನ ಆಸ್ತಿ, ಇತರ ಹಿಡುವಳಿಗಳ ನಡುವೆ ಸೇರಿವೆ ಎಂದು ಹೇಳಲಾಗಿದೆ.
ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ಅಂಕಿಅಂಶಗಳು ನಿಖರವಾಗಿವೆ ಎಂದು ಫ್ಯೂ ಥಾಯ್ ಪಕ್ಷದ ಪ್ರತಿನಿಧಿ AFP ಗೆ ದೃಢಪಡಿಸಿದರು. ಫೋರ್ಬ್ಸ್ ಪ್ರಕಾರ ಪ್ರಧಾನಿ ಪೇಟೊಂಗ್ಟಾರ್ನ್ ಶಿನಾವತ್ರಾ ಥೈಲ್ಯಾಂಡ್ನಲ್ಲಿ 10 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.(ಏಜೆನ್ಸೀಸ್)