

ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೇಬಲ್ ಟಿವಿ ಶುಲ್ಕವನ್ನು ಪರಿಷ್ಕರಿಸಿದ್ದು, ಹೊಸ ದರ ಆದೇಶದ ಅನ್ವಯ ಗ್ರಾಹಕರು -ಠಿ; 130ಕ್ಕೆ 200 ಚಾನಲ್ಗಳನ್ನು ವೀಕ್ಷಿಸಬಹುದಾಗಿದೆ.
ಈ ಪ್ಯಾಕೇಜ್ನಲ್ಲಿ ಕಡ್ಡಾಯವಾಗಿ ನೀಡಬೇಕಿರುವ ಪ್ರಸಾರ ಭಾರತಿ ಚಾನಲ್ಗಳನ್ನು ಹೊರಗಿಡಲಾಗಿದೆ. ಈ ಮೊದಲು 130ರೂ.ಗೆ ನೂರು ಚಾನಲ್ಗಳ ಪ್ಯಾಕೇಜ್ ಮಾತ್ರ ನೀಡಲಾಗುತ್ತಿತ್ತು ಮತ್ತು ಪ್ರಸಾರ ಭಾರತಿ ಚಾನೆಲ್ಗಳು ಕಡ್ಡಾಯವಾಗಿತ್ತು. ಕೇಬಲ್ ಪ್ರಸಾರಕರು ಯಾವುದೇ ಚಾನಲ್ಗಳಿಗೂ ಬೊಕ್ಕೆ ಮತ್ತು ಅ-ಲಾ-ಕಾರ್ಟ್ ದರಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ.
ಬೊಕ್ಕೆ ಚಾನಲ್ ದರವನ್ನು ಟ್ರಾಯ್ 19ರೂ.ರಿಂದ 12ಕ್ಕೆ ಪರಿಷ್ಕರಿಸಿದೆ.