

ಚಾಮರಾಜನಗರ: ( Chamarajanagar ) ಐದು ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟ ಕಹಿ ನೆನಪು ಮಾಸುವ ಮುನ್ನವೇ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ-ಕೊಡಸೋಗೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಕೋತಿಗಳ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಬಫರ್ ವಲಯದ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಕೊಡಸೋಗೆ ರಸ್ತೆಯಲ್ಲಿ ರಾಶಿ ರಾಶಿ ವಾನರಗಳ ಕಳೇಬರ ಬಿದ್ದಿವೆ. ಸೆರೆ ಹಿಡಿದ ಕೋತಿಗಳಿಗೆ ವಿಷವಿಕ್ಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಸುಮಾರು ಇಪ್ಪತ್ತೈದು ಕೋತಿಗಳು ಮೃತಪಟ್ಟಿವೆ. ಕೋತಿಗಳ ನೋಡಲು ಜನರು ಮುಗಿ ಬೀಳುತ್ತಿದ್ದಾರೆ.
ಬದುಕುಳಿದ ಎರಡು ಕೋತಿಗಳ ಆಕ್ರಂದನ ಮನಕಲಕುವಂತಿತ್ತು. ಸತ್ತ ಕೋತಿಗಳನ್ನು ಎದ್ದೇಳಿಸಲು ಎಳೆದಾಡುತ್ತಿದ್ದ ದೃಶ್ಯ ಕಂಡು ಬಂದಿತು.