ಬೆಂಗಳೂರಿನಿಂದ ಹೊರಟಿದ್ದ ಕೇರಳ ಸರ್ಕಾರಿ ಬಸ್​ಗೆ ತಮಿಳುನಾಡಿನಲ್ಲಿ ಲಾರಿ ಡಿಕ್ಕಿ: 20 ಮಂದಿ ದುರ್ಮರಣ, ಹಲವರಿಗೆ ಗಾಯ

Accident 20 Feb 20
Published on

ತಿರುಪುರ: ತಮಿಳುನಾಡಿನ ಅವಿನಾಶಿ ಪಟ್ಟಣದ ಬಳಿ ಭೀಕರ ಅಪಘಾತದಲ್ಲಿ 20 ಮಂದಿ ಮೃತಪಟ್ಟಿದ್ದು 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು ಮುಂಜಾನೆ ತಿರುಪುರದ ಅವಿನಾಶಿ ಬಳಿ ಕೇರಳದ ಸರ್ಕಾರಿ ಬಸ್​ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ. ಕೇರಳ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಬೆಂಗಳೂರಿನಿಂದ ಕೇರಳದ ಎರ್ನಾಕುಲಂಗೆ ಹೋಗುತ್ತಿತ್ತು. ಮುಂಜಾನೆ 3ಗಂಟೆ ಹೊತ್ತಿಗೆ ಅವಿನಾಶಿಯ ಬಳಿ ಕಂಟೇನರ್​ ಡಿಕ್ಕಿಯಾಗಿದೆ.

ಬಸ್​ನಲ್ಲಿ 48 ಪ್ರಯಾಣಿಕರು ಇದ್ದರು. ಕೇರಳ ರಸ್ತೆ ಸಾರಿಗೆ ಎಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಕೇರಳ ಸಾರಿಗೆ ಇಲಾಖೆ ಸಚಿವ ಎ.ಕೆ.ಸಸೀಂದ್ರನ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net