486 ರೈತ ಉತ್ಪಾದಕ ಸಂಸ್ಥೆಗಳಿಗೆ 20 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ| Grant release

N Chaluvaraya Swamy
Published on

ಬೆಂಗಳೂರು: ರಾಜ್ಯದ 486 ಅಮೃತ ರೈತ ಉತ್ಪಾದಕ ಸಂಸ್ಥೆಗಳಿಗೆ 20 ಕೋಟಿ ರೂ.ಅನುದಾನ ಒದಗಿಸಲಾಗಿದೆ(20 crores to 486 farmer producer organizations. Special grant release).

ರೈತ ಉತ್ಪಾದನಾ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ(N Chaluvarayaswamy) ಮೂರು ವರ್ಷಗಳಿಂದ ಬಿಡುಗಡೆಯಾಗದಿದ್ದ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿ ಸರ್ಕಾರ ಅಮೃತ ರೈತ ಉತ್ಪಾದಕರ ಸಂಸ್ಥೆಗಳ ಸ್ಥಾಪನೆ ಮತ್ತು ಪ್ರೋತ್ಸಾಹಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿ ಯಾವುದೇ ಅನುದಾನ ನೀಡಿರಲಿಲ್ಲ.

ಸ್ಥಾಪನೆ ಮತ್ತು ಪ್ರೋತ್ಸಾಹ ಕಾರ್ಯಕ್ರಮ

ರಾಜ್ಯದಲ್ಲಿ ರೈತ / ಮೀನುಗಾರರ / ನೇಕಾರರನ್ನು ಸಂಘಟಿಸಿ ಅವರ ಉತ್ಪಾದಕತೆ ಹೆಚ್ಚಿಸುವುದಲ್ಲದೇ ಅವರು ಬೆಳೆದಂತಹ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ರೈತ ಎ್.ಪಿ.ಒ ಗಳನ್ನು ಸ್ಥಾಪಿಸಲಾಗಿದೆ.

ವಿವಿಧ ಅನುಷ್ಠಾನ ಇಲಾಖೆಗಳಾದ ಜಲಾನಯನ ಅಭಿವೃದ್ಧಿ ಇಲಾಖೆ / ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕೈಮಗ್ಗ ಮತ್ತು ಜವಳಿ ಹಾಗೂ ಮೀನುಗಾರಿಕೆ ಇಲಾಖೆಗಳಿಂದ ಈ ರೈತ ಉತ್ಪಾದನಾ ಸಂಸ್ಥೆಗಳನ್ನು ರಚಿಸಿ ಉತ್ತೇಜಿಸಲಾಗುತ್ತಿದೆ. ಅನುದಾನ ಕೊರತೆಯಿಂದ ಹಲವಾರು ಎ್.ಪಿ.ಒ.ಗಳು ಪರಿಣಾಮಕಾರಿಯಾಗಿ ವ್ಯಾಪಾರ ವ್ಯವಹಾರ ಪ್ರಾರಂಭಿಸಲು ಸಾಧ್ಯವಾಗದೆ ತೊಂದರೆಗೆ ಒಳಗಾಗಿದ್ದವು.

2024-25ನೇ ಸಾಲಿನಲ್ಲಿ ಅಮೃತ ರೈತ ಉತ್ಪಾದನಾ ಸಂಸ್ಥೆಗಳ ಉತ್ತೇಜನಕ್ಕೆ 20 ಕೋಟಿ ರೂ. ಅನುದಾನ ಒದಗಿಸುವುದರಿಂದ ರೈತ ಉತ್ಪಾದನಾ ಸಂಸ್ಥೆಗಳಿಗೆ ಅನೇಕ ಉಪಯೋಗವಾಗುತ್ತದೆ.

ಏನು ಉಪಯೋಗ?

-ರೈತ ಉತ್ಪಾದಕರ ಕಂಪನಿಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಅನುಕೂಲವಾಗಲಿದೆ.

-ಆರಂಭಿಕ ಹಂತದಲ್ಲಿದ್ದ ರೈತ ಉತ್ಪಾದಕ ಕಂಪನಿಗಳನ್ನು ಸುಸ್ಥಿರವಾಗಿ ಕಟ್ಟಲು ಸಹಾಯವಾಗುತ್ತದೆ.

-ಅನುದಾನ ಸದ್ಭಳಕೆ ಮಾಡಿಕೊಂಡು ಮುಂಬರುವ ವರ್ಷಗಳಲ್ಲಿ ಸ್ವಾವಲಂಬಿಯಾಗಿ ಕಂಪನಿ ಬೆಳೆಸಲು ಮತ್ತು ಷೇರುದಾರರ ಅವಶ್ಯಕತೆಗಳನ್ನು ಗ್ರಾಮ ಮಟ್ಟದಲ್ಲಿ ಒದಗಿಸಲು ಸಹಕಾರಿಯಾಗಲಿದೆ.

-ರೈತರ ಆದಾಯ ದ್ವಿಗುಣ ಮಾಡುವುದು ಮತ್ತು ಉತ್ತಮ ಗುಣಮಟ್ಟದ ಬಿತ್ತನೆ ಬೀಜದಿಂದ ಮಾರುಕಟ್ಟೆವರೆಗೆ ಪರಿಪೂರ್ಣ ಸೇವೆ ಒದಗಿಸಲು ಈ ಅನುದಾನದಿಂದ ಅನುಕೂಲವಾಗಲಿದೆ.

-ರೈತರಿಗೆ ಅವಶ್ಯಕತೆ ಇರುವಂತಹ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಹಾಗೂ ಇತರೆ ಕೃಷಿ ಪರಿಕರಗಳು ಸಮಯಕ್ಕೆ ಸರಿಯಾಗಿ ಸೂಕ್ತ ಬೆಲೆಗೆ ದೊರಕುವಂತಾಗುತ್ತದೆ.

-ರೈತ ಉತ್ಪಾದಕರ ಕಂಪನಿಗಳು ಗಟ್ಟಿಯಾದಲ್ಲಿ ರೈತ / ಷೇರುದಾರರಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಲು ಅನುಕೂಲವಾಗುತ್ತದೆ.

-ಸರ್ಕಾರ ಬಿಡುಗಡೆ ಮಾಡಿರುವ ಸಹಾಯಧನದಿಂದ ವ್ಯಾಪಾರ ವೃದ್ಧಿ ಮಾಡಲು ಅವಕಾಶವಾಗಿದೆ. -ಕಾರ್ಯನಿರ್ವಹಣಾಧಿಕಾರಿ ಹಾಗೂ ಇತರೆ ಸಿಬ್ಬಂದಿ ನೇಮಕ ಮಾಡಿಕೊಂಡು ರೈತ ಉತ್ಪಾದಕರ ಸಂಸ್ಥೆಗಳಿಂದ ಪರಿಣಾಮಕಾರಿ ಸೇವೆಗಳನ್ನು ಒದಗಿಸಲು ಅನುಕೂಲವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net