ಐಷಾರಾಮಿ ಅಪಾರ್ಟ್‌ಮೆಂಟ್​​​ನಲ್ಲಿ ಇಬ್ಬರು ಮಾಡೆಲ್​ಗಳು ಶವವಾಗಿ ಪತ್ತೆ..!

model mix
Published on

ಅಮೆರಿಕಾ: ಇಬ್ಬರು ಅಮೆರಿಕಾ ಮೂಲದ ಮಾಡೆಲ್‌ಗಳು ಐಷಾರಾಮಿ ಅಪಾರ್ಟ್‌ಮೆಂಟೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

31 ವರ್ಷದ ಮೆಲೀಸಾ ಮೂನಿ ಶವ ಸೆಪ್ಟೆಂಬರ್ 12 ರಂದು ಪತ್ತೆಯಾಗಿದ್ದರೆ, ಮತ್ತೊಬ್ಬ ಮಾಡೆಲ್ 32 ವರ್ಷದ ನಿಕೋಲೆ ಕೋಟ್ಸ್ ಶವ ಸೆಪ್ಟೆಂಬರ್ 10 ರಂದು ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಈ ಎರಡೂ ಅಪಾರ್ಟ್‌ಮೆಂಟ್‌ಗಳು ಕೇವಲ ಒಂದು ಮೈಲು ಅಂತರದಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.


ಮೆಲೀಸಾ ಮೂನಿ ಬಂಕರ್ ಹಿಲ್‌ನಲ್ಲಿರುವ ಅವರ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಕುಟುಂಬದವರು ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ವಿಚಾರ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.


ಮತ್ತೊಬ್ಬ ಮಾಡೆಲ್ ನಿಕೋಲೆ ಕೋಟ್ಸ್‌ ಅವರ ಸಾವಿಗೆ ಎರಡು ದಿನಗಳ ಹಿಂದಷ್ಟೇ ಕಲ್ಯಾಣ ಅಧಿಕಾರಿಗಳು ಆಕೆಯ ಯೋಗಕ್ಷೇಮ ವಿಚಾರಿಸಲು ಕರೆ ಮಾಡಿದ್ದರು. ಆದರೆ ಈ ವೇಳೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಯಾರೋ ಕರೆ ಮಾಡಿ ಮನೆಯಲ್ಲಿ ಶವ ಇರುವ ಬಗ್ಗೆ ತಿಳಿಸಿದ್ದಾರೆ.
ನಿಕೋಲೆ ಕೋಟ್ಸ್ ಕುಟುಂಬದವರು ಇದೊಂದು ಕೊಲೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.


ಎರಡೂ ಪ್ರಕರಣಗಳು ಒಂದಕ್ಕೊಂದು ಸಂಬಂಧಿಸಿದ್ದೆ ಎಂಬುದು ಇನ್ನು ಖಚಿತವಾಗಿಲ್ಲ, ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಎರಡು ಕೊಲೆ ಪ್ರಕರಣಗಳಿಗೆ ಸಂಬಂಧ ಇದೆ ಎಂದು ಈ ಎರಡು ಮಾಡೆಲ್‌ಗಳ ಕುಟುಂಬದವರು ಶಂಕಿಸಿದ್ದು, ಬಹುಶಃ ಸರಣಿ ಹಂತಕ ಈ ಕೃತ್ಯವೆಸಗಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಮಧ್ಯೆ ಏನಾದರೂ ಸಂಬಂಧವಿದೆಯೇ ಅವರಿಬ್ಬರೂ ಬಹುತೇಕ ಒಂದೇ ಪ್ರದೇಶದಲ್ಲಿದ್ದರು.

ಅಥವಾ ಎರಡಕ್ಕೂ ಸಂಬಂಧವಿಲ್ಲದ ಹತ್ಯೆಯೇ ಎಂದು ಖಚಿತಪಡಿಸಿಕೊಳ್ಳಲು ಬಯಸಿದ್ದೇವೆ ಎಂದು ಮಾಡೆಲ್ ಕೋಟ್ಸ್ ತಾಯಿ ಶೇನಿಯ ಮೇಸನ್ ಹೇಳಿದ್ದಾರೆ.
ಆಕೆಗೆ ಯಾರೂ ಈ ರೀತಿ ಮಾಡಿದರು, ಆಕೆಯ ಸಾವಿಗೆ ಕಾರಣ ಯಾರು?, ಈ ಪ್ರಕರಣ ಅಲ್ಲಿಗೆ ಮುಚ್ಚಿ ಹೋಗಬಾರದು ಎಂದು ಶೇನಿಯ ಮೇಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net