ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 16 ವರ್ಷದ ಬಾಲಕರು..!

ppp
Published on

ಫರಿದಾಬಾದ್​​: 16 ವರ್ಷದ ಬಾಲಕರಿಬ್ಬರು ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹರಿಯಾಣದ ಫರಿದಾಬಾದ್​​​​ನಲ್ಲಿ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಹದಿಹರೆಯದವರು ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಅನ್ನೋದನ್ನ ಪೊಲೀಸರು ಈವರೆಗೂ ಖಚಿತ ಪಡಿಸಿಲ್ಲ.


ಬಾಲಕರಿಬ್ಬರ ಕುಟುಂಬಸ್ಥರು ಇದು ಕೊಲೆ ಎಂಬ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.


ಫರಿದಾಬಾದ್ ನಿವಾಸಿಗಳಾದ ಇಬ್ಬರು ಬಾಲಕರು ಜತೆಗೆಯಾಗಿ ಒಂದೇ ಶಾಲೆಗೆ ತೆರಳುತ್ತಿದ್ದರು. ಇದರಲ್ಲಿ ಒಬ್ಬ ಬಾಲಕ ಮತ್ತು ಆತನ ಕುಟುಂಬ ಬೇರೆ ಊರಿಗೆ ಹೋಗಬೇಕಾಗಿತ್ತು. ಜತೆಗೆ ಶಾಲೆಯನ್ನು ಬದಲಾಯಿಸುವುದೂ ಅನಿವಾರ್ಯವಾಗಿತ್ತು.


ಭಾನುವಾರದಂದು ಇಬ್ಬರು ಬಾಲಕರು ಜೊತೆಯಾಗಿ ವಾಕಿಂಗ್​ಗೆ ತೆರಳಿದ್ದರು. ಬಾಲಕರಲ್ಲಿ ಒಬ್ಬ ತನ್ನ ಅಣ್ಣನಿಗೆ ದಾರಿಯಲ್ಲಿ ಸಿಕ್ಕಿ ಮಾತನಾಡಿ, ನಾನು ಮತ್ತೆ ಬರುವೆ ಎಂದು ಹೇಳಿ ಅಲ್ಲಿಂದ ತನ್ನ ಸ್ನೇಹಿತನ ಜತೆಗೆ ಹೋಗಿದ್ದಾನೆ. ಮತ್ತೊಬ್ಬ ಬಾಲಕ ಮೊಬೈಲ್​​​ನ್ನು ಕೂಡ ತೆಗೆದುಕೊಂಡ ಹೋಗಿದ್ದು, ಮನೆಗೆ ಒಂದು ಬಾರಿ ಕೆರೆಯನ್ನೂ ಮಾಡಿದ್ದ.


ಸ್ವಲ್ಪ ಸಮಯದ ಬಳಿಕ ಮನೆಯವರು ಬಾಲಕನ ಮೊಬೈಲ್​ಗೆ ಕರೆ ಮಾಡಲು ಪ್ರಯತ್ನಿಸಿದಾಗ ಕರೆ ಹೋಗಿಲ್ಲ. ಇದರಿಂದ ಭಯಗೊಂಡ ಮನೆಯವರು ತಕ್ಷಣ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾರೆ.


ಪೋಷಕರು ಬಾಲಕ ತೆಗೆದುಕೊಂಡು ಹೋಗಿದ್ದ ಫೋನ್​​ಗೆ ಕರೆ ಮಾಡಿದ್ದರೂ, ಯಾರು ಕರೆ​​ ಸ್ವೀಕರಿಸಿಲ್ಲ, ಮಧ್ಯರಾತ್ರಿ ಊರೆಲ್ಲ ಹುಡುಕಾಟ ನಡೆಸಿದ್ದಾರೆ. ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಸಿದ್ದತಾ ಆಶ್ರಮದ ಹಿಂಭಾಗದ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ.


ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net