

ಬಾಗ್ದಾದ್: ಇರಾಕ್ನಲ್ಲಿರೋ ಯುಎಸ್ ಏರ್ ಬೇಸ್ ಮೇಲೆ ರಾಕೆಟ್ ದಾಳಿ ನಡೆದಿದ್ದು, ರಾಯಭಾರ ಕಚೇರಿ ಸಮೀಪ ಮಾರ್ಟರ್ ರೌಂಡ್ಸ್ ಬಿದ್ದಿರುವುದಾಗಿ ಶನಿವಾರ ವರದಿಯಾಗಿದೆ.
ಇರಾಕ್ ರಾಜಧಾನಿ ಬಾಗ್ದಾದ್ನ್ ಗ್ರೀನ್ಜೋನ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿ ಶನಿವಾರ ಸಂಜೆ ಮಾರ್ಟರ್ ರೌಂಡ್ಸ್ ದಾಳಿ ನಡೆದಿದ್ದು, ಒಂದು ಕ್ಷಿಪಣಿ ಕಚೇರಿಯ ಒಳಗೆ ಬಿದ್ದಿದ್ದರೆ ಮತ್ತೊಂದು ಸಮೀಪ ಬಿದ್ದಿದೆ ಎಂದು ಇರಾಕ್ ಮಿಲಿಟರಿ ಮೂಲಗಳು ತಿಳಿಸಿವೆ.
ಒಂದು ಜೋಡಿ ಕತ್ಯುಶಾ ರಾಕೆಟ್ ಬಾಗ್ದಾದ್ ಉತ್ತರ ಭಾಗದಲ್ಲಿರುವ ಅಮೆರಿಕ ಸೇನೆಯ ಬಲಾಡ್ ಏರಬೇಸ್ ಮೇಲೆ ದಾಳಿ ನಡೆಸಿರುವುದಾಗಿಯೂ ಇರಾಕ್ ಸೇನಾ ಮೂಲಗಳು ತಿಳಿಸಿದ್ದು, ಸಾವು ನೋವಿನ ಬಗ್ಗೆ ಈವರೆಗೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಇರಾನ್ನ ಬಾಗ್ದಾದ್ ಏರ್ಪೋರ್ಟ್ನಲ್ಲಿ ಶುಕ್ರವಾರ ಅಮೆರಿಕ ಸೇನಾ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಪ್ರಮುಖ ಕ್ಯೂಡ್ಸ್ ಪೋರ್ಸ್ನ ಮುಖ್ಯಸ್ಥ ಜನರಲ್ ಕಾಸಿಂ ಸೊಲೆಮಾನ್ ಹತ್ಯೆಯಾದ ದಿನದ ಬೆನ್ನಲ್ಲೇ ಇರಾಕ್ ಅಮೆರಿಕ ಸೇನಾ ಪಡೆ ಮತ್ತು ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. (ಏಜೆನ್ಸೀಸ್)