ದುಬೈನಿಂದ ಬಂದವರ ಒಳ ಉಡುಪಿನಲ್ಲಿತ್ತು ಕೆಜಿಗಟ್ಟಲೇ ಚಿನ್ನದ ಪೇಸ್ಟ್....

pic gold
Published on

ನವದೆಹಲಿ: ದುಬೈನಿಂದ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರ ಒಳ ಉಡುಪಿನಲ್ಲಿ ಚಿನ್ನದ ಪೇಸ್ಟ್ ದೊರೆತ್ತಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಒಳ ಉಡುಪಿನಲ್ಲಿ ಅಡಗಿಸಿಟಿದ್ದ ಸುಮಾರು 1.369 ಕೆಜಿ ತೂಕದ ಚಿನ್ನದ ಪೇಸ್ಟ್ ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 09 ರಂದು ದುಬೈನಿಂದ ಬಂದ ಇಬ್ಬರು ಪ್ರಯಾಣಿಕರನ್ನ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಚಿನ್ನವನ್ನು ತಂದಿರುವುದು ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net