ಹಾಗಾಗಿ ಸ್ಮಾರಕ ರಕ್ಷಣೆಗೆ ಕ್ರಮ ವಹಿಸಬೇಕು. ಕಟ್ಟಡ ದುರಸ್ತಿ ಮಾಡಿ, ಹರಿದ ಚಿತ್ರ ಪಟಗಳನ್ನು ಬದಲಿಸಬೇಕು. ಸ್ಮಾರಕ ಭವನ ನಿರ್ವಹಣೆಗೆ ಸಿಬ್ಬಂದಿ, ರಾತ್ರಿ ಕಾವಲುಗಾರರನ್ನು ನೇಮಿಸಬೇಕು. ಕಾಯಮಾಗಿ ಬಾಗಿಲು ತೆರೆದು ಪ್ರವಾಸಿಗರ, ವಿದ್ಯಾರ್ಥಿಗಳ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು.ಸ್ಮಾರಕದ ಉದ್ಯಾನವನ, ಸಂಗೀತ ಕಾರಂಜಿ ಪುನರುಜ್ಜೀವನ ಮಾಡಬೇಕು. ಇದಕ್ಕೆಲ್ಲ 2 ಕೊಟಿ ರೂ. ನೀಡುವಂತೆ ದಿನೇಶ ಗೂಳಿಗೌಡ ಸಿಎಂಗೆ ಮನವಿ ಮಾಡಿದ್ದರು.