ಯಾತ್ರಿ ನಿವಾಸ ನಿರ್ಮಾಣಕ್ಕೆ 2 ಕೋಟಿ ರೂ.

2 crore for the construction of Yatri Niwas.
ಲೋಣಿ ಬಿಕೆ ಗ್ರಾಮದ ಶ್ರಿಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನಿಡಿದ ಕೃಷಿ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ್​ರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.ದೇವಸ್ಥಾನ ಕಮಿಟಿ ಅಧ್ಯ ಕೆ.ಎಸ್​. ಪಾಟೀಲ, ಮುಖಂಡ ಎಂ.ಆರ್​. ಪಾಟೀಲ ಇತರರಿದ್ದರು.
Published on

ಹೊರ್ತಿ: ಸಮೀಪದ ಲೋಣಿ ಬಿಕೆ ಗ್ರಾಮದ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಕೃಷಿ ಮಾರುಕಟ್ಟೆ, ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಗುರುವಾರ ಭೇಟಿ ನೀಡಿ ದರ್ಶನ ಪಡೆದರು.

ನಂತರ ಮಾತನಾಡಿದ ಅವರು, ದೇವಸ್ಥಾನದ ಇಂದ್ರಪ್ರಸ್ಥ ಮಂಗಲಭವನದ ವಾಸ್ತು ಶಿಲ್ಪ ವಿಶೇಷವಾಗಿದೆ. ದೇವಸ್ಥಾನದ ಎರಡು ಎಕರೆ ಜಾಗದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಸಿದ್ಧೇಶ್ವರ ದೇವಸ್ಥಾನ ಕಮಿಟಿ ಅಧ್ಯ ಕೆ.ಎಸ್​. ಪಾಟೀಲ ಮಾತನಾಡಿದರು.

ಮುಖಂಡ ಎಂ.ಆರ್​. ಪಾಟೀಲ ಮತ್ತು ದೇವಸ್ಥಾನ ಕಮಿಟಿ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

*ೋಟೊ: ಹೊರ್ತಿ6&1

ಲೋಣಿ ಬಿಕೆ ಗ್ರಾಮದ ಶ್ರಿಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನಿಡಿದ ಕೃಷಿ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ್​ರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.ದೇವಸ್ಥಾನ ಕಮಿಟಿ ಅಧ್ಯ ಕೆ.ಎಸ್​. ಪಾಟೀಲ, ಮುಖಂಡ ಎಂ.ಆರ್​. ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net