ಜಿಎಸ್​ಟಿ ಕಟ್ಟುವ ಬದಲು ನಮಗೆ ಕೊಡಿ ಎಂದ ಅಧಿಕಾರಿಗಳು ಎಸಿಬಿ ಬಲೆಗೆ

acb2
Published on

ಚಾಮರಾಜನಗರ: ಅಂಗಡಿ ಮಾಲಿಕರೊಬ್ಬರಿಂದ ಜಿಎಸ್​ಟಿ ಹಣವನ್ನು ಲಂಚವಾಗಿ ಪಡೆಯುವ ವೇಳೆ ಇಬ್ಬರು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಾಮರಾಜನಗರದ ವಾಣಿಜ್ಯ ತೆರಿಗೆ ಇನ್ಸ್​ಪೆಕ್ಟರ್​ಗಳಾದ ರವಿಕುಮಾರ್ ಮತ್ತು ಅವಿನಾಶ್ ಸಿಕ್ಕಿಬಿದ್ದ ಅಧಿಕಾರಿಗಳು.

ಚಾಮರಾಜನಗರ ತಾಲೂಕಿನ ನಾಗವಳ್ಳಿ ಆಟೋಪಾರ್ಟ್ಸ್ ಅಂಗಡಿ ಮಾಲೀಕ ತೌಸಿಫ್ ಎಂಬುವರಿಗೆ ಸರ್ಕಾರಕ್ಕೆ ಸಲ್ಲಬೇಕಾದ ಜಿಎಸ್​​ಟಿ ಹಣ ಕಟ್ಟದೆ ತಮಗೆ ಹಣ ನೀಡುವಂತೆ ಈ ಅಧಿಕಾರಿಗಳು ಹೇಳಿದ್ದರು. ಒಟ್ಟು 7 ಸಾವಿರ ರೂಪಾಯಿ ಲಂಚ ಪಡೆದುಕೊಂಡು ಪರಸ್ಪರ ಹಂಚಿಕೆ ಮಾಡಿಕೊಂಡಿದ್ದರು. ರವಿಕುಮಾರ್ ಬಳಿ 2 ಸಾವಿರ ರೂ. ಪತ್ತೆಯಾದರೆ, ಅವಿನಾಶ್ ಬಳಿ 5 ಸಾವಿರ ರೂ. ಪತ್ತೆಯಾಗಿದೆ. ಇಬ್ಬರನ್ನೂ ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net