ಏರ್‌ಪೋರ್ಟ್‌ಗೆ 2 ನಗರ ಸಾರಿಗೆ ಕಾರ್ಯಾರಂಭ

shimogga airport
ಶಿವಮೊಗ್ಗ ಏರ್‌ಪೋರ್ಟ್
Published on

ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಶಿವಮೊಗ್ಗ ವಿಭಾಗದಿಂದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣಕ್ಕೆ ಎರಡು ಬಸ್‌ಗಳು ಕಾರ್ಯಾರಂಭಗೊಂಡಿವೆ. ಶಿವಮೊಗ್ಗದಿಂದ ಏರ್‌ಪೋರ್ಟ್ ಮಾರ್ಗವಾಗಿ ಕಾಚಿನಕಟ್ಟೆಗೆ 2 ನಗರ ಸಾರಿಗೆ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್‌ಕುಮಾರ್ ತಿಳಿಸಿದ್ದಾರೆ.

ಶಿವಮೊಗ್ಗ ಬಸ್ ನಿಲ್ದಾಣದಿಂದ ಬೆಳಗ್ಗೆ 9.45, 10, ಮಧ್ಯಾಹ್ನ 12.45, 2, 3 ಮತ್ತು 3.30ಕ್ಕೆ ಅದೇ ರೀತಿ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ/ಕಾಚಿನಕಟ್ಟೆಯಿಂದ ಬೆಳಗ್ಗೆ 10.40, 11.40, ಮಧ್ಯಾಹ್ನ 1.30, 2.45, 3.35 ಹಾಗೂ ಸಂಜೆ 4.05ರ ಸಮಯದಲ್ಲಿ ಬಸ್ ಸಂಚರಿಸುತ್ತಿವೆ. ಸಾರ್ವಜನಿಕರು ಈ ಬಸ್‌ಗಳ ಸೌಲಭ್ಯ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್, ಗೋವಾ, ತಿರುಪತಿ, ಚೆನ್ನೈಗೆ ವಿಮಾನ ಸಂಪರ್ಕ ಆರಂಭಗೊಂಡಿದ್ದರೂ ಪ್ರಯಾಣಿಕರಿಗೆ ಏರ್‌ಪೋರ್ಟ್‌ಗೆ ತೆರಳಲು ಅಥವಾ ಅಲ್ಲಿಂದ ಊರುಗಳಿಗೆ ತೆರಳಲು ನಗರ ಸಾರಿಗೆ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಅದನ್ನೇ ಬಂಡವಾಳ ಮಾಡಿಕೊಂಡಿದ್ದ ಟ್ಯಾಕ್ಸಿ ವಾಹನಗಳ ಮಾಲೀಕರಿಗೆ ಸಾವಿರಾರು ರೂ. ನೀಡಿ ಶಿವಮೊಗ್ಗಕ್ಕೆ ಬರಬೇಕಿತ್ತು. ಈ ಬಗ್ಗೆ ‘ಏರ್‌ಪೋರ್ಟ್‌ಗಿಲ್ಲ ನಗರ ಸಾರಿಗೆ ವ್ಯವಸ್ಥೆ’ ಶೀರ್ಷಿಕೆಯಡಿ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬಳಿಕ ಎಚ್ಚೆತ್ತುಕೊಂಡ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗ ಇದೀಗ ಮತ್ತೆ ಎರಡು ನಗರ ಸಾರಿಗೆಯನ್ನು ಆರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net