2 ಎಕರೆ ಸಪೋಟ ಗಿಡ ನಾಶ

sapota
ಸಪೋಟ ಗಿಡಗಳನ್ನು ದುಷ್ಕರ್ಮಿಗಳು ಕತ್ತರಿಸಿ ನಾಶಪಡಿಸಿದ್ದಾರೆ.
Published on

ಕೋಲಾರ/ಮುಳಬಾಗಿಲು: ತಾಲೂಕಿನ ಹೆಬ್ಬಣಿ ಗ್ರಾಮದ ರೈತರೊಬ್ಬರ 2 ಎಕರೆ ತೋಟದಲ್ಲಿ ಬೆಳೆದಿದ್ದ 15 ವರ್ಷದ ಸಪೋಟ ಗಿಡಗಳನ್ನು ದುಷ್ಕರ್ಮಿಗಳು ಸೋಮವಾರ ರಾತ್ರಿ ಕತ್ತರಿಸಿ ನಾಶಪಡಿಸಿದ್ದಾರೆ.

ಗ್ರಾಮದ ರೈತ ರಾಮಚಂದ್ರಪ್ಪಗೆ ಸೇರಿದ 4 ಎಕರೆ ಜಮೀನಿನಲ್ಲಿ ಎರಡು ಎಕರೆಯಲ್ಲಿ ಸಪೋಟ, ಇನ್ನೇರೆಡು ಎಕರೆಯಲ್ಲಿ ತೆಂಗು, ಚೇಪೆಕಾಯಿ ಬೆಳೆದಿದ್ದರು. ಇದರಲ್ಲಿ ಒಂದು ತೆಂಗಿನ ಮರ ಸೇರಿ 160 ಸಪೋಟ ಗಿಡ ಕಡಿದು ಹಾಕಿದ್ದಾರೆ. ಇದರಿಂದ ಲಕ್ಷಾಂತರ ನಷ್ಟ ಸಂಭವಿಸಿದೆ.
ಭೂ ವಿವಾದವೇ ಕಾರಣವೇ: ರಾಮಚಂದ್ರಪ್ಪ ಮತ್ತು ಅಮರ ನಾರಾಯಣ ಸಂಬಂಧಿಕರಾಗಿದ್ದು, ಇಬ್ಬರ ನಡುವಿನ ಭೂ ವಿವಾದ ಪ್ರಕರಣ ಎಸಿ ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ವಿವಾದ ಉಂಟಾಗಿ ಪೊಲೀಸ್​ ಠಾಣೆ ಮೆಟ್ಟಲು ಹತ್ತಿದ್ದು, ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೃತ್ಯ ಎಸಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿ, ನಂಗಲಿ ಪೊಲೀಸ್​ ಠಾಣೆಗೆ ದೂರು ನೀಡುವುದಾಗಿ ರಾಮಚಂದ್ರಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net