

ನವದೆಹಲಿ: ಭಾರತದಲ್ಲಿ ಕಳೆದ 10 ವರ್ಷಗಳಿಂದ ಬಡತನ ನಿವಾರಣೆಯಲ್ಲಿ ಭಾರಿ ಪ್ರಮಾಣದ ಸುಧಾರಣೆ ಕಂಡು ಬರುತ್ತಿದ್ದು ಬಹು ಆಯಾಮದ ಬಡತನ ಕಡಿಮೆಯಾಗಿದೆ.
2.73 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 2000-2019ರ ನಡುವೆ 65 ದೇಶಗಳಲ್ಲಿ ಬಹು ಆಯಾಮದ ಬಡತನ ಕಡಿಮೆಯಾಗಿದೆ. ಅದರಲ್ಲೂ ಬಡತನ ರೇಖೆಯಿಂದ ಹೊರಬಂದ ಜನರಲ್ಲಿ ಅರ್ಧದಷ್ಟು ಜನರು ಅಮೇನಿಯಾ, ಭಾರತ, ನಿಸಾರಗುವಾ, ಉತ್ತರ ಮಸೆಡೋನಿಯಾ ದೇಶಗಳ ನಾಗರಿಕರಾಗಿ ದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2005-06ರಿಂದ 2015-16ರ ಅವಧಿಯಲ್ಲಿ ಭಾರತ ಬಹಳಷ್ಟು ಸುಧಾರಿಸಿಕೊಂಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.